Advertisements

ಡಿಸಿಎಂ ಡಿಕೆಶಿಗೆ ಪತ್ರ ಬರೆದು ಒಆರ್‌ಆರ್‌ಸಿಎ ಬೇಸರ- Kannada Prabha

ಬೆಂಗಳೂರು: ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ನೀಡಲಾಗಿದ್ದ 100 ದಿನಗಳ ಗಡುವು ಪೂರ್ಣಗೊಂಡಿದ್ದರೂ, ಸಮಸ್ಯೆಗೆ ಯಾವುದೇ ಪರಿಹಾರ ನೀಡಲಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್‌ಆರ್‌ಸಿಎ), ಈ ಮೂಲಕ ಬೇಸರವನ್ನು ವ್ಯಕ್ತಪಡಿಸಿದೆ.

17 ಕಿಮೀ ಉದ್ದದ ಔಟರ್ ರಿಂಗ್ ರೋಡ್ ರಸ್ತೆಯಲ್ಲಿ 500 ಕಂಪನಿಗಳಿದ್ದು 10 ಲಕ್ಷ ಜನ ನೆಲೆಸಿದ್ದಾರೆ. ಸಮಸ್ಯೆಗಳನ್ನ 100 ದಿನದೊಳಗೆ ಪರಿಹರಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ವಲಯ ಆಯುಕ್ತರಿಗೆ ಗಡುವು ಡಿಕೆ ಶಿವಕುಮಾರ್​ ನೀಡಿದ್ದರು. ಇದೀಗ ನೀಡಿದ್ದ 100 ದಿನದ ಗುಡುವು ಮುಕ್ತಾಯವಾದರು ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ.

ಸಂಚಾರ ಸಮಯದಲ್ಲಿ ಅಂದರೆ ಪೀಕ್ ಅವರ್​ನಲ್ಲಿ ಬೆಳ್ಳಂದೂರು, ಔಟರ್ ರಿಂಗ್ ರೋಡ್ ಸುತ್ತಮುತ್ತ ಟ್ರಾಫಿಕ್ ಬಿಸಿ ತಟ್ಟುತ್ತದೆ. ಗಂಟೆಗಟ್ಟಲೇ ಟ್ರಾಫಿಕ್ ಜಾಮ್​ ಉಂಟಾಗುತ್ತದೆ. ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಐಟಿಬಿಟಿ ಮಂದಿ ಸುಸ್ತಾಗಿದ್ದಾರೆ.

ಮೆಟ್ರೋ ಕಾಮಗಾರಿ ಕೂಡ ನಡಿಯುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಹಿಗಾಗಿ  ವಾಹನದಟ್ಟಣೆಯಿಂದ ಮುಕ್ತಿ ಕೊಡಿ ಎಂದು ಐಟಿಬಿಟಿ ಕಂಪನಿಗಳು ಪತ್ರದಲ್ಲಿ ಅಳಲು ತೊಡಿಕೊಂಡಿವೆ.

ಸರ್ಕಾರಕ್ಕೆ ಸಹಕಾರ ನೀಡಲು ಐಟಿ ಕಂಪನಿಗಳು ಬದ್ಧವಾಗಿವೆ. ವಿವರವಾದ ವರದಿಯನ್ನು ಒದಗಿಸಲು ಮತ್ತು ಬಾಕಿ ಉಳಿದಿರುವ ಕಾರ್ಯಗಳ ಕುರಿತು ಚರ್ಚಿಸಲು ಭರವಸೆ ನೀಡಿದಂತೆ ಉಪಮುಖ್ಯಮಂತ್ರಿಗಳು ಜನವರಿಯಲ್ಲಿ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಹೇಳಿವೆ.

Source link

Leave a Comment

Advertisements

Recent Post

Live Cricket Update