Advertisements

ಮೂರು ರಾಜ್ಯದಲ್ಲಿ ‘ಮಿತಿ’ ಮೀರಿದೆ ತಾಪಮಾನ…!

ಭುವನೇಶ್ವರ್: ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕರ್ನಾಟಕದ ಕಲಬುರಗಿಯಲ್ಲಿ ಕೂಡ 43.3ರಷ್ಟು ತಾಪಮಾನ ದಾಖಲಾಗಿ ವಾತಾವರಣ ನಿಗಿನಿಗಿ ಕೆಂಡದಂತಾಗಿದೆ.

ಭುವನೇಶ್ವರದ ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಉಮಾಶಂಕರ್ ದಾಸ್ ಏಷ್ಯಾದ ಹತ್ತು ಪ್ರಮುಖ ಸ್ಥಳಗಳ ತಾಪಮಾನ ದಾಖಲಿ ಸಿದ್ದು, ಮ್ಯಾನ್ಮಾರ್ ಚೌಕ್ನಲ್ಲಿ ಬರೋಬ್ಬರಿ 45.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಅತ್ಯಂತ ಹೆಚ್ಚು ತಾಪಮಾನ ದಾಖಲಾದ ಸ್ಥಳವೆಂದು ಕಂಡುಬಂದಿದೆ.

ಆಂಧ್ರದ ನಂದ್ಯಾಲದಲ್ಲಿ ಶುಕ್ರವಾರ 43.7 ರಷ್ಟು ತಾಪಮಾನ ದಾಖಲಾಗಿದೆ. ಅತಿಹೆಚ್ಚು ತಾಪಮಾನ ದಾಖಲಾದ ಸ್ಥಳ ಇದಾಗಿದೆ. ಭುವನೇಶ್ವರದಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಒಡಿಶಾದ 14 ಜಿಲ್ಲೆ ಗಳಲ್ಲಿ ಉಷ್ಣದ ಅಲೆಗಳು ಹೆಚ್ಚಾಗಲಿವೆ ಎಂದು ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಕಲಬುರಗಿಯಲ್ಲಿ 43.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ 9ನೇ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ರಾಜ್ಯದ ಬಹುತೇಕ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಹಲವೆಡೆ ಬಿಸಿ ಗಾಳಿ ಬೀಸುತ್ತಿದೆ. ಜನ – ಜಾನು ವಾರುಗಳ ಕುಡಿಯುವ ನೀರಿಗಾಗಿ ಸಂಕಷ್ಟ ಎದುರಾಗಿದೆ.

Leave a Comment

Advertisements

Recent Post

Live Cricket Update