Advertisements

ಮಿಡ್ನಾಪುರದಲ್ಲಿ ಎನ್‌ಐಎ ಮೇಲೆ ಇಟ್ಟಿಗೆ, ಕಲ್ಲುಗಳಿಂದ ದಾಳಿ

ಮಿಡ್ನಾಪುರ: ತನಿಖೆಗೆ ತೆರಳಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೇಲೆ ಇಟ್ಟಿಗೆ, ಕಲ್ಲುಗಳಿಂದ ದಾಳಿ ನಡೆದಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ಜರುಗಿದೆ.

ತೃಣಮೂಲ ಕಾಂಗ್ರೆಸ್ ಮುಖಂಡರ ಮನೆಯಲ್ಲಿ 2022ರಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆಗಾಗಿ ಎನ್‌ಐಎ ತಂಡ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಗೆ ತಲುಪಿತ್ತು.

ಮಿಡ್ನಾಪುರ ಜಿಲ್ಲೆಯ ಭೂಪತಿನಗರದಲ್ಲಿ ಶನಿವಾರ ಬೆಳಗ್ಗೆ ಎನ್‌ಐಎ ತಂಡ ತಲುಪುತ್ತಿದ್ದಂತೆ ಅವರ ಕಾರುಗಳ ಮೇಲೆ ಕಲ್ಲು, ಇಟ್ಟಿಗೆಗಳನ್ನು ಎಸೆಯಲಾಗಿದೆ. ಅಧಿಕಾರಿಗಳ ಕಾರಿನ ಗ್ಲಾಸುಗಳು ಒಡೆದಿವೆ.

ಡಿಸೆಂಬರ್ 3, 2022 ರಂದು, ಭೂಪತಿನಗರದಲ್ಲಿ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದರು. ಕಳೆದ ತಿಂಗಳು ಸ್ಫೋಟ ಕ್ಕೆ ಸಂಬಂಧಿಸಿ ಎನ್‌ಐಎ ಎಂಟು ತೃಣಮೂಲ ಕಾಂಗ್ರೆಸ್ ನಾಯಕರನ್ನು ವಿಚಾರಣೆಗೆ ಕರೆಸಿತ್ತು. ಮಾ.28ರಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಆದರೆ, ಸಮನ್ಸ್ ಧಿಕ್ಕರಿಸಿದ್ದ ಹಿನ್ನೆಲೆ ಅವರ ಮನೆಗೆ ಎನ್‌ಐಎ ತಂಡ ತೆರಳಿತ್ತು.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಇಡಿ ತಂಡದ ಮೇಲೆ ದಾಳಿ ನಡೆದಿತ್ತು.

Leave a Comment

Advertisements

Recent Post

Live Cricket Update