Advertisements

ಮದ್ಯ ಪ್ರಿಯರಿಗೆ ಶಾಕ್; ಬಜೆಟ್‌ಗೂ ಮುನ್ನ ಬಿಯರ್ ದರ ಶೇ. 10 ರಷ್ಟು ಹೆಚ್ಚಳ ಸಾಧ್ಯತೆ

ಬೆಂಗಳೂರು: ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌ ಒಂದನ್ನು ನೀಡಿದ್ದು, ಬಜೆಟ್‌ಗೂ ಮುನ್ನವೇ ಬಿಯರ್ ದರವನ್ನು ಶೇ.10ರಷ್ಟು ಹೆಚ್ಚಿಸಲು ಮುಂದಾಗಿದೆ.

ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ(ಎಇಡಿ)ಯನ್ನು ಶೇಕಡ 10 ರಷ್ಟು ಹೆಚ್ಚಿಸ ಸರ್ಕಾರ ಮುಂದಾಗಿದೆ. 650 ಎಂಎಲ್ ಬಿಯರ್ ಬಾಟಲಿಗೆ 8 ರಿಂದ 10 ರೂಪಾಯಿ ವರೆಗೆ ಹೆಚ್ಚಳವಾಗಲಿದೆ. ಬಿಯರ್‌ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಿದರೆ ಗ್ರಾಹಕರ ಜೇಬಿಗೆ ಹೊರೆ ಬೀಳಲಿದೆ.

ಇದನ್ನು ಓದಿ: ಬೆಂಗಳೂರು: ಮದ್ಯ ಸೇವಿಸಿ ಚಾಲನೆ; 16 ಶಾಲಾ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲು​

ಈ ಸಂಬಂಧ ರಾಜ್ಯ ಸರ್ಕಾರ ಜನವರಿ 20, 2024 ರಂದು ಅಧಿಸೂಚನೆ ಹೊರಡಿಸಿದ್ದು, ಹೆಚ್ಚುವರಿ ಅಬಕಾರಿ ತೆರಿಗೆ ಏರಿಕೆಗೆ ಅವಕಾಶ ಕಲ್ಪಿಸುವ ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಶನಿವಾರದಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಆಸಕ್ತರು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಲು ಅವಕಾಶವಿದೆ.

ರಾಜ್ಯ ಸರ್ಕಾರ ಜನವರಿ ಕೊನೆಯ ವಾರ ಅಥವಾ ಫೆಬ್ರುವರಿ ಮೊದಲ ವಾರ ಹೊಸ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ.

ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಐದು ಗ್ಯಾರಂಟಿ ಯೋಜನೆಗಳಿಗೆ 50,000 ಕೋಟಿ ರೂಪಾಯಿ ಅನ್ನು ಬಜೆಟ್ ನಲ್ಲಿ ಮೀಸಲಿಟ್ಟಿರುವುದರಿಂದ ಈ ಕ್ರಮವನ್ನು ನಿರೀಕ್ಷಿಸಲಾಗಿತ್ತು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಬಿಯರ್ ದರದಲ್ಲಿ ಸಂಭವನೀಯ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಅವರು,”ನಾನು ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇದು (ಬಿಯರ್ ದರವನ್ನು ಹೆಚ್ಚಿಸುವ ನಿರ್ಧಾರದ ಬಗ್ಗೆ) ಚರ್ಚೆಯಲ್ಲಿದೆ. ಬಜೆಟ್ ಇರುವುದರಿಂದ, ನಾನು ಏನನ್ನೂ ಹೇಳಲಾರೆ ಎಂದಿದ್ದಾರೆ.

Source link

Leave a Comment

Advertisements

Recent Post

Live Cricket Update