ನವದೆಹಲಿ: ಪ್ರೊ ಕಬಡ್ಡಿ ಸೆಮಿಫೈನಲ್ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದ್ದು, 98ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಲಿವೆ.
ಬೆಂಗಳೂರು ಬುಲ್ಸ್ ಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಪಾಟ್ನಾ ಪೈರೇಟ್ಸ್ ತಂಡ ತನ್ನ ಹೋಂ ಗ್ರೌಂಡಲ್ಲಿ ಜಯದ ಓಟ ಮುಂದುವರಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ಬೆಂಗಳೂರು ಬುಲ್ಸ್ ಇಂದಿನ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಜೊತೆ ಜಯ ಸಾಧಿಸಿದರೆ ಏಳನೇ ಸ್ಥಾನಕ್ಕೆ ಬರುವ ಅವಕಾಶವಿದೆ.
ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ಸೆಣಸಾಡಲಿದ್ದು, ಬಲಿಷ್ಠ ಡಿಪೆಂಡರ್ ಗಳನ್ನು ಹೊಂದಿರುವ ತಮಿಳ್ ತಲೈವಾಸ್ ತಂಡ ಅರ್ಜುನ್ ದೇಶವಾಲ್ ಓಟಕ್ಕೆ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ.
ತಮಿಳ್ ತಲೈವಾಸ್ ಒಂದರ ಮೇಲೊಂದು ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುತ್ತಿದ್ದು, ಮತ್ತೊಮ್ಮೆ ಸೆಮಿಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಕಳೆದ ಬಾರಿಯೂ ಇದೇ ರೀತಿ ಕೊನೆಯ ಹಂತದಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಗೆಲ್ಲುವ ಮೂಲಕ ತಮಿಳ್ ತಲೈವಾಸ್ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.