Advertisements

ವಿಮಾನ ರದ್ದು: ʼಇಂಡಿಗೋ ಚೋರ್‌ ಹೈʼ ಎಂದು ಘೋಷಣೆ ಕೂಗಿದ ಪ್ರಯಾಣಿಕರು

ವದೆಹಲಿ: ವಿಮಾನಯಾನ ಸಂಸ್ಥೆ ಇಂಡಿಗೋ ಜಾರ್ಖಂಡ್‌ನ ದಿಯೋಘರ್‌ಗೆ ತೆರಳಬೇಕಿದ್ದ ವಿಮಾನವನ್ನು ರದ್ದು ಗೊಳಿಸಿದ ಹಿನ್ನೆಲೆಯಲ್ಲಿ  ದೆಹಲಿಯ ನಿಲ್ದಾಣದಲ್ಲೇ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.

ಬುಧವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ರದ್ದಾದ ಬಳಿಕ ಪ್ರಯಾಣಿಕರು ಗೊಂದಲಕ್ಕೊಳಗಾಗಿ ದ್ದಾರೆ.

ಈ ವೇಳೆ ಕೋಪಗೊಂಡ ಪ್ರಯಾಣಿಕರು ಸಂಸ್ಥೆಯ ಈ ಹಠಾತ್‌ ನಿರ್ಧಾರವನ್ನು ಪ್ರಶ್ನಿಸಿ ʼಇಂಡಿಗೋ ಚೋರ್‌ ಹೈʼ ಎಂಬ ಘೋಷಣೆಯನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ರಾಜಧಾನಿಯಲ್ಲಿ ದಟ್ಟ ಮಂಜು ಆವೃತವಾಗಿದ್ದು, ಗೋಚರತೆ ತಗ್ಗಿದ ಕಾರಣ ವಿಮಾನಯಾನ ಸಂಸ್ಥೆಯು ಇಂದು ದೆಹಲಿ ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಸೇವೆಗಳನ್ನು ರದ್ದುಗೊಳಿಸಿದೆ. ʼವಿಮಾನಯಾನ ನಿಯಂತ್ರಣ ವನ್ನು ಮೀರಿದ ಅಂಶಗಳಿಂದಾಗಿʼ ವಿಮಾನವನ್ನು ರದ್ದುಗೊಳಿಸ ಲಾಗಿದೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.

ಇಂಡಿಗೋ ಫ್ಲೈಟ್ 6E 2198 ದೆಹಲಿಯಿಂದ ದಿಯೋಗರ್‌ಗೆ ಜನವರಿ 30, 31 ರಂದು ಹೊರಡಬೇಕಿತ್ತು. ಆದರೆ ದಿಯೋ ಗರ್‌ನಲ್ಲಿರುವ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹವಾಮಾನ ಪರಿಸ್ಥಿತಿಗಳ ಹಠಾತ್ ಏರಿಳಿತಗಳಿಂದಾಗಿ ರದ್ದು ಗೊಳಿಸಲಾಯಿತು. ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ, ಪರ್ಯಾಯ ವಲಯಗಳು ಅಥವಾ ಮತ್ತೊಂದು ಸಮಯದ ನಿಗದಿಯನ್ನು ಪಡೆಯಲು ಉಪಹಾರ ಮತ್ತು ಇತರ ಆಯ್ಕೆಗಳನ್ನು ಒದಗಿಸಲಾಗಿದೆ.

Leave a Comment

Advertisements

Recent Post

Live Cricket Update