Advertisements

6 ದಿನ ಪಾದಯಾತ್ರೆ: 350 ಮುಸ್ಲಿಮರಿಂದ ರಾಮಮಂದಿರದಲ್ಲಿ ಪ್ರಾರ್ಥನೆ

ಯೋಧ್ಯೆ: ಲಕ್ನೋದಿಂದ 6 ದಿನ ಪಾದಯಾತ್ರೆ ಮೂಲಕ ಅಯೋಧ್ಯೆಗೆ ಆಗಮಿಸಿದ 350 ಮುಸ್ಲಿಮರು ರಾಮಮಂದಿರ ದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ರಾಷ್ಟ್ರೀಯ ಮಂಚ್‍ನ ಸಂಚಾಲಕ ರಾಜಾ ರಯೀಸ್ ಮತ್ತು ಪ್ರಾಂತೀಯ ಸಂಚಾಲಕ ಶೇರ್ ಅಲಿ ಖಾನ್ ನೇತೃತ್ವದಲ್ಲಿ 350 ಭಕ್ತರು ಪಾದ ಯಾತ್ರ ಮೂಲಕ ಬಂದು ಶ್ರೀರಾಮ ಮಂದಿರದಲ್ಲಿ ರಾಮ್ ಲಾಲಾವನ್ನು ನೋಡಿದ ಎಲ್ಲರೂ ಭಾವಪರವಶರಾಗಿದ್ದಾರೆ.

ಎಲ್ಲರ ಬಾಯಲ್ಲಿ ಶ್ರೀ ರಾಮನ ಸ್ಮರಣೆ ಭಕ್ತಿ ಬಾವ ನೋಡಿ ಎಲ್ಲರೂ ಬೆರಗಾಗಿದ್ದಾರೆ.

ಸುಮಾರು 350 ಮುಸ್ಲಿಂ ಭಕ್ತರೊಂದಿಗೆ ಲಕ್ನೋದಿಂದ ಅಯೋಧ್ಯೆಗೆ ಸರಿಸುಮಾರು 150 ಕಿ.ಮೀ ಆರು ದಿನಗಳ ಪಾದ ಯಾತ್ರೆಯನ್ನು ಕೈಗೊಂಡರು. ಪ್ರಯಾಣದ ಸಮಯದಲ್ಲಿ, ಮಂಚ್ನ ಸೀತಾ ರಸೋಯಿ ಉಪಹಾರ ಮತ್ತು ಆಹಾರಕ್ಕಾಗಿ ಅತ್ಯುತ್ತಮವಾದ ವ್ಯವಸ್ಥೆ ನೀಡಲಾಗಿದೆ.

ಶ್ರೀರಾಮ ಮಂದಿರದಲ್ಲಿ ರಾಮ್ ಲಾಲಾ ದರ್ಶನದ ನಂತರ ದೇವಾಲಯದ ಆವರಣದಲ್ಲಿ ಮಾತನಾಡಿದ ಮಂಚ್ ಸಂಚಾಲಕ ರಾಜಾ ರಯೀಸ್ , ರಾಮನು ಎಲ್ಲರಿಗೂ ಪೂರ್ವಜ ಎಂದು ಪ್ರತಿಪಾದಿಸಿದ್ದಾರೆ.

Leave a Comment

Advertisements

Recent Post

Live Cricket Update