Advertisements

ಕಛ್‌ ಜಿಲ್ಲೆಯಲ್ಲಿ 4.1 ತೀವ್ರತೆಯ ಭೂಕಂಪ

ವದೆಹಲಿ: ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ.

ಗುರುವಾರ ಬೆಳಿಗ್ಗೆ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಕಂಪನದ ಕೇಂದ್ರ ಬಿಂದು 15 ಕಿ.ಮೀ.ಆಳದಲ್ಲಿ ಇತ್ತು ಎಂದು ಅದು ತಿಳಿಸಿದೆ.

ಅತಿ ಹೆಚ್ಚಿನ ಭೂಕಂಪದ ಅಪಾಯ ವಲಯದಲ್ಲಿರುವ ಕಛ್‌ ಪ್ರದೇಶದಲ್ಲಿ 2001ರಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಅಂದು 10 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಅಪಾರ ಪ್ರಮಾಣದ ನಷ್ಟ ಸಂಭವಿಸಿತ್ತು.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು (ಎನ್‌ಸಿಎಸ್) ದೇಶದಲ್ಲಿ ಸಂಭವಿಸುವ ಭೂಕಂಪದ ಚಟುವಟಿಕೆಗಳನ್ನು ಪತ್ತೆ ಮಾಡಲು ಇರುವ ಭಾರತ ಸರ್ಕಾರದ ಸಂಸ್ಥೆಯಾಗಿದೆ.

Leave a Comment

Advertisements

Recent Post

Live Cricket Update