Advertisements

ವಿತ್ತ ಸಚಿವೆಯಿಂದ ಒಂದಿಷ್ಟು ಹೊಸ ಯೋಜನೆಗಳ ಘೋಷಣೆ

ವದೆಹಲಿ: ಮಧ್ಯಂತರ ಬಜೆಟ್​ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಒಂದಿಷ್ಟು ಹೊಸ ಯೋಜನೆಗಳ ಘೋಷಣೆ ಮಾಡಿದರು.

ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೇ, ಕೆಲವೊಂದಿಷ್ಟು ಕೊಡುಗೆಗಳನ್ನು ಘೊಷಣೆ ಮಾಡುವ ಮೂಲಕ ಬಜೆಟ್​ ಮಂಡನೆಯನ್ನು ಬೇಗನೇ ಮುಕ್ತಾಯಗೊಳಿಸಿದರು.

ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದ ಆರ್ಥಿಕತೆ ವೇಗವಾಗಿ ಪರಿವರ್ತನೆಯತ್ತ ಸಾಗಿದೆ. ಮುಂದಿನ ಐದು ವರ್ಷ ದೇಶವು ಅಭಿವೃದ್ಧಿ ಪಥದಲ್ಲಿ ಸಾಗ ಲಿದೆ ಎನ್ನುವ ಮೂಲಕ ಮತ್ತೊಮ್ಮೆ ತಮ್ಮ ಸರ್ಕಾರ ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಬಡವರು, ಮಹಿಳೆಯರು, ಯುವ ಕರು ಮತ್ತು ರೈತರ ಸ್ಥಿತಿಗತಿಗಳನ್ನು ಸುಧಾರಿಸುವತ್ತ ನಮ್ಮ ಸರ್ಕಾರ ಗಮನ ಹರಿಸಿದೆ ಎಂದು ನಿರ್ಮಲಾ ಸೀತಾರಾಮನ್​ ಒತ್ತಿ ಹೇಳಿದರು.

ಮಧ್ಯಂತರ ಬಜೆಟ್​ನ ಪ್ರಮುಖಾಂಶಗಳು: 
* ಕಳೆದ 10 ವರ್ಷಗಳಲ್ಲಿ 250 ಮಿಲಿಯನ್​ಗೂ ಅಧಿಕ ಮಂದಿಯನ್ನು ನಮ್ಮ ಸರ್ಕಾರ ಬಡತನ ರೇಖೆಯಿಂದ ಹೊರಗಡೆ ತಂದಿದೆ.
* ಬೆಳೆ ವಿಮೆ ಯೋಜನೆಯ ಲಾಭ 40 ಮಿಲಿಯನ್​ ರೈತರನ್ನು ತಲುಪಲಿದೆ.
* ನಮ್ಮ ಸರ್ಕಾರ ಕೈಗೊಂಡಿರುವ ತೆರಿಗೆ ಸುಧಾರಣೆ ಕ್ರಮಗಳಿಂದ ತೆರಿಗೆ ಮೂಲವು ವಿಸ್ತರಿಸಿದೆ ಮತ್ತು ತೆರಿಗೆ ಸಂಗ್ರಹ ಹೆಚ್ಚಾಗಿದೆ.
* ಜಗತ್ತಿನ ಪ್ರಮುಖ ರಾಷ್ಟ್ರಗಳ ನಡುವೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯು ಆಳವಾದ ಪರಿವರ್ತನೆ ಮೂಲಕ ಸಾಗುತ್ತಿದೆ.
* 2047ರ ವೇಳೆಗೆ ದೇಶವನ್ನು ವಿಕಸಿತ ಭಾರತ ಮಾಡುವ ಗುರಿಯನ್ನು ಸರ್ಕಾರದ ಹೊಂದಿದೆ.
* ರಕ್ಷಣಾ ಉದ್ದೇಶಗಳಿಗಾಗಿ ಆಳವಾದ ತಂತ್ರಜ್ಞಾನ ಬಲಪಡಿಸಲು ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ.
* ಮಧ್ಯಮ ವರ್ಗದ ಅರ್ಹ ಜನರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಸಹಾಯ ಮಾಡಲಿದೆ.
* ಮುಂದಿನ ಐದು ವರ್ಷದಲ್ಲಿ ಸರ್ಕಾರ 2 ಕೋಟಿ ಹೆಚ್ಚುವರಿ ಮನೆಗಳನ್ನು ನಿರ್ಮಾಣ ಮಾಡಲಿದೆ ಮತ್ತು ಈಗಾಗಲೇ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ.
* ದೇಶದಲ್ಲಿ ಸ್ವ-ಸಹಾಯ ಗುಂಪುಗಳ ಯಶಸ್ಸು 1 ಕೋಟಿ ಮಹಿಳೆಯರಿಗೆ ಲಖಪತಿ ದೀದಿಗಳಾನ್ನಾಗಿ ಮಾಡಿದೆ.
* ಹಣಕಾಸು ವರ್ಷ 2024 ವಿತ್ತೀಯ ಕೊರತೆಯು GDP ಯ 5.8% ನಲ್ಲಿ ಗುರಿಗಿಂತ ಕಡಿಮೆಯಾಗಿದೆ; 2025ರ ಹಣಕಾಸು ವರ್ಷದಲ್ಲಿ 5.1% ಕ್ಕೆ ನಿಗದಿಪಡಿಸಲಾಗಿದೆ ಮತ್ತು 2026ರ ಹಣಕಾಸು ವರ್ಷದ ವೇಳೆಗೆ ಅದನ್ನು 4.5% ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.
* ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ (ನೇರ ಮತ್ತು ಪರೋಕ್ಷ ತೆರಿಗೆ)
* ಸ್ಟಾರ್ಟ್​ಅಪ್​, ಚಿನ್ನದ ಮೇಲಿನ ಹೂಡಿಕೆಗಳು, ಪಿಂಚಣಿ ನಿಧಿಗಳ ಮೇಲಿನ ತೆರಿಗೆ ಪ್ರಯೋಜನಗಳನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಗುವುದು.
* ದ್ವೀಪ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ್ ತನ್ನ ಪ್ರವಾಸಿ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರದಿಂದ ವಿಶೇಷ ಗಮನವನ್ನು ಪಡೆಯುತ್ತದೆ.

Leave a Comment

Advertisements

Recent Post

Live Cricket Update