Advertisements

ಜಾರ್ಖಂಡ್‍ನ ಮುಖ್ಯಮಂತ್ರಿಗೆ ಬಹುಮತದ ’ಅಗ್ನಿಪರೀಕ್ಷೆ’

ವದೆಹಲಿ: ಜಾರ್ಖಂಡ್‍ನ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಚಂಪೈ ಸೊರೆನ್ ಸೋಮವಾರ ತಮ್ಮ ಸರಕಾರದ ಬಹುಮತವನ್ನು ಸಾಬೀತುಪಡಿಸಬೇಕಾಗಿರುವುದರಿಂದ ರೆಸಾರ್ಟ್ ರಾಜಕಾರಣ ಶುರುವಾಗಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸಮ್ಮಿಶ್ರ ಸಜಾರ್ಖಂಡ್‍ನ ಮುಖ್ಯಮಂತ್ರಿಗೆ ಬಹುಮತದ ’ಅಗ್ನಿ ಪರೀಕ್ಷೆ’ರ್ಕಾರದ ಸುಮಾರು 40 ಶಾಸಕರನ್ನು ಬಿಜೆಪಿ ಸೆಳೆಯುವ ಸಾಧ್ಯತೆ ಇದ್ದು, ಅವರನ್ನು ರಕ್ಷಿಸಲು ತೆಲಂಗಾಣದ ರಾಜಧಾನಿ ಹೈದರಾಬಾದ್ ಬಳಿಯ ರೆಸಾರ್ಟ್‍ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.

ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯ ನಡುವೆಯೇ ಉನ್ನತ ಹುದ್ದೆ ತೊರೆದಿ ರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯನ್ನು ದುರ್ಬಲ ಗೊಳಿಸಲು ಕೇಂದ್ರದ ಬಿಜೆಪಿ ಉದ್ದೇಶಪೂರ್ವಕವಾಗಿ ಗುರಿಯಾಗಿಸಿದೆ ಎಂದು ಆರೋಪಿಸಿದ್ದಾರೆ. ಜಾರ್ಖಂಡ್ ವಿಧಾನಸಭೆಯು 81 ಸ್ಥಾನಗಳನ್ನು ಹೊಂದಿದ್ದು, ಬಹುಮತ ಸಾಬೀತುಪಡಿಸಲು 41 ಶಾಸಕರ ಅವಶ್ಯಕತೆ ಇದೆ.

ವಿಶ್ವಾಸಮತ ಪರೀಕ್ಷೆ ನಡೆಯುವವರೆಗೆ ಶಾಸಕರನ್ನು ರಕ್ಷಿತ ಸ್ಥಳದಲ್ಲಿ ಇರಿಸಲಾಗುವುದು ಎಂದು ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ತಿಳಿಸಿದ್ದಾರೆ.

ಸೆಪ್ಟೆಂಬರ್ 2022 ರಲ್ಲಿ, ಹೇಮಂತ್ ಸೊರೆನ್ ಪರವಾಗಿ 48 ಮತಗಳೊಂದಿಗೆ ಬಹುಮತದ ಪರೀಕ್ಷೆಯನ್ನು ಗೆದ್ದಿದ್ದರು.

ಜೆಎಂಎಂ-ಕಾಂಗ್ರೆಸ್-ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ 46 ಸ್ಥಾನಗಳನ್ನು ಹೊಂದಿದೆ – ಜೆಎಂಎಂ 28, ಕಾಂಗ್ರೆಸ್ 16, ಆರ್‍ಜೆಡಿ 1, ಮತ್ತು ಸಿಪಿಐ (ಎಂಎಲ್) ಲಿಬರೇಶನ್ 1 ಶಾಸಕರನ್ನು ಹೊಂದಿದೆ.

Leave a Comment

Advertisements

Recent Post

Live Cricket Update