Advertisements

ನಾಟಕ ಪ್ರದರ್ಶನದಲ್ಲಿ ಸಿಗರೇಟ್ ಸೇದಿದ ಸೀತಾ ಪಾತ್ರಧಾರಿ: 6 ವಿದ್ಯಾರ್ಥಿಗಳ ಬಂಧನ

ಪುಣೆ: ಪುಣೆ ವಿಶ್ವ ವಿದ್ಯಾಲಯದ ಲಲಿತಕಲಾ ಅಕಾಡೆಮಿಯಲ್ಲಿ ನಡೆದ ನಾಟಕ ಪ್ರದರ್ಶನದಲ್ಲಿ ರಾಮಾಯಣದ ಬಗ್ಗೆ ಹಾಗೂ ರಾಮಾಯಣದ ಪಾತ್ರ ಧಾರಿಗಳು ಆಕ್ಷೇಪಾರ್ಹ ದೃಶ್ಯ ಮಾಡಿದ್ದು, ಪ್ರಕರಣ ಸಂಬಂಧ 6 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ರಾಮಾಯಣದ ನಾಟಕ ಪ್ರದರ್ಶನದ ವೇಳೆ ಸೀತಾ ಪಾತ್ರಧಾರಿ ವೇದಿಕೆ ಮೇಲೆಯೇ ಸಿಗರೇಟ್ ಸೇದುತ್ತಾ ಕುಳಿತಿರುವುದೂ ಅಲ್ಲದೇ ಲಕ್ಷ್ಮಣ ಪಾತ್ರಧಾರಿ ಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ದೃಶ್ಯ ವೈರಲ್ ಆಗಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುಣೆ ಘಟಕದ ಮುಖ್ಯಸ್ಥ ಚತುಶೃಂಗಿ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ ಐ ಆರ್ ದಾಖಲಾಗಿದೆ.

ಪ್ರಕರಣ ಸಂಬಂಧ ಲಲಿತಕಲಾ ಕೇಂದ್ರದ ಮುಖ್ಯಸ್ಥ ಡಾ.ಪ್ರವೀನ್ ದತ್ತಾತ್ರೆಯ ಭೋಲೆ, ನಾಟಕದ ಲೇಖಕ ಭವೇಶ್ ಪಟೇಲ್ ಹಾಗೂ 6 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಟಕ ಪ್ರದರ್ಶನದಲ್ಲಿ ಆಕ್ಷೇಪರ್ಹವಾಗಿ ನಡೆದುಕೊಂಡು ಅಪಮಾನ ಮಾಡಿದ ಹಿನ್ನೆಲೆಯಲ್ಲಿ 6 ವಿದ್ಯಾರ್ಥಿ ಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Leave a Comment

Advertisements

Recent Post

Live Cricket Update