Advertisements

ಉದ್ರೇಕಕಾರಿ ಭಾಷಣ: ಮುಸ್ಲಿಂ ವಾಗ್ಮಿ ಮುಫ್ತಿ ಸಲ್ಮಾನ್ ಅಝ್ಹರಿ ಬಂಧನ

ಮುಂಬಯಿ: ಮಹಾರಾಷ್ಟ್ರ ಮತ್ತು ಗುಜರಾತ್ ಪೊಲೀಸರು ಮುಸ್ಲಿಂ ವಾಗ್ಮಿ ಮುಫ್ತಿ ಸಲ್ಮಾನ್ ಅಝ್ಹರಿ ಅವರನ್ನು ಉದ್ರೇಕಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ.

ಮುಫ್ತಿ ಸಲ್ಮಾನ್ ರನ್ನು ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿತ್ತು. ಈ ಮಾಹಿತಿ ಅರಿತ ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನೂರಾರು ಬೆಂಬಲಿಗರು ಠಾಣೆಯ ಹೊರಗೆ ಜಮಾಯಿಸಿದ್ದರು.

ಮೌಲ್ವಿಗಳು ಪೊಲೀಸ್ ಠಾಣೆಯ ಒಳಗಿನಿಂದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಪ್ರತಿಭಟನೆ ಮಾಡದಂತೆ ಕೇಳಿ ಕೊಂಡರು.

“ನಾನೇನೂ ಕ್ರಿಮಿನಲ್ ಅಲ್ಲ ಅಥವಾ ಅಪರಾಧ ಎಸಗಿದ್ದಕ್ಕಾಗಿ ನನ್ನನ್ನು ಇಲ್ಲಿಗೆ ಕರೆತರಲಾಗಿಲ್ಲ. ಅವರು ಅಗತ್ಯ ವಿರುವ ತನಿಖೆಯನ್ನು ಮಾಡು ತ್ತಿದ್ದಾರೆ ಮತ್ತು ನಾನು ಸಹ ಅವರಿಗೆ ಸಹಕರಿಸುತ್ತಿದ್ದೇನೆ. ನಾನು ತಪ್ಪು ಮಾಡಿದ್ದರೆ ಬಂಧಿಸಲಿ. ಯಾರೂ ಕೂಡ ಪ್ರಚೋದನೆಗೊಳಗಾಗಡಬೇಡಿ. ಶಾಂತಿ ಕಾಪಾಡಿ” ಎಂದು ಮುಫ್ತಿ ಸಲ್ಮಾನ್ ಅಝ್ಹರಿ ಹೇಳಿದ್ದಾರೆ.

ಗುಜರಾತ್ ನ ಜುನಾಗಢದಲ್ಲಿ ದ್ವೇಷಭಾಷಣ ಮಾಡಿದ್ದರು ಎಂಬ ಆರೋಪ ಮುಫ್ತಿ ಸಲ್ಮಾನ್ ಅಝರಿ ಅವರ ಮೇಲೆ ಹೊರಿಸಲಾಗಿದೆ. ಅಝರಿ ಮತ್ತು ಇತರ ಇಬ್ಬರು ಧಾರ್ಮಿಕ ಮುಖಂಡರ ವಿರುದ್ಧ ಎಫ್‌ಐಆ‌ರ್ ದಾಖಲಿಸಲಾಗಿದೆ. ಜುನಾಗಢ ಬಿ. ಡಿವಿಷನ್ ಠಾಣೆಯ ಬಳಿ ಅಝರಿ ಅವರು ಜ.31ರಂದು ಉದ್ರೇಕಕಾರಿ ಭಾಷಣ ಮಾಡಿದ್ದಾರೆ ಎನ್ನಲಾಗಿದೆ.

Leave a Comment

Advertisements

Recent Post

Live Cricket Update