Advertisements

ಜುಲೈನಲ್ಲಿ ಟೀಂ ಇಂಡಿಯಾಕ್ಕೆ ಜಿಂಬಾಬ್ವೆ ಪ್ರವಾಸ

ವದೆಹಲಿ: ಜುಲೈನಲ್ಲಿ ಭಾರತವು 5 ಪಂದ್ಯಗಳ ಟಿ20ಐ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಜನವರಿ 6 ರ ಮಂಗಳವಾರ ಹೇಳಿಕೆಯಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಭಾರತದ ಹರಾರೆ ಪ್ರವಾಸವನ್ನು ದೃಢಪಡಿಸಿದೆ.

ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ಬಳಿಕ ಈ ಸರಣಿ ನಡೆಯಲಿದೆ. ಹರಾರೆಯಲ್ಲಿ ಜುಲೈ 6 ರಿಂದ 14 ರವರೆಗೆ ಜಿಂಬಾಬ್ವೆ 5 ಪಂದ್ಯಗಳ ಟಿ20ಐ ಸರಣಿಯನ್ನು ಆಯೋಜಿಸಲಿದೆ.

2010, 2015 ಮತ್ತು 2016ರ ಬಳಿಕ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿರುವುದು ಇದು ನಾಲ್ಕನೇ ಬಾರಿ. ಭಾರತವು ಜಿಂಬಾಬ್ವೆ ವಿರುದ್ಧ ತವರಿನಲ್ಲಿ ದ್ವಿಪಕ್ಷೀಯ ಸರಣಿಯನ್ನ ಆಡಿಲ್ಲ.

Leave a Comment

Advertisements

Recent Post

Live Cricket Update