Advertisements

ಫೆ.11 ರಂದು ಭಾರತ vs ಆಸ್ಟ್ರೇಲಿಯಾ ಅಂಡರ್-19 ವಿಶ್ವಕಪ್ ಫೈನಲ್‌

ಅಂಡರ್-19 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತ ವನ್ನು ಎದುರಿಸಲಿದೆ.

ಈ ಪಂದ್ಯ ಮೂರು ತಿಂಗಳ ಹಿಂದೆ ಆಡಿದ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ನ ನೆನಪು ಮರುಕಳಿಸಿದೆ. 2023ರ ವಿಶ್ವಕಪ್ ಫೈನಲ್‌ನಲ್ಲಿ ನವೆಂಬರ್ 19 ರಂದು ಆಡಲಾಯಿತು. ಈ ಬಾರಿ ಜೂನಿಯರ್ ಟೀಂ ಇಂಡಿಯಾ ಕೂಡ ಒಂದೇ ಒಂದು ಪಂದ್ಯದಲ್ಲಿ ಸೋಲದೆ ಫೈನಲ್ ತಲುಪಿದೆ.

ಭಾರತದ U19 ತಂಡ ಉದಯ್ ಸಹರನ್ ನಾಯಕತ್ವದಲ್ಲಿ ತನ್ನ ಮೂರು ಗುಂಪಿನ ಪಂದ್ಯಗಳನ್ನು ಗೆದ್ದಿದೆ. ಇದರ ನಂತರ ಅವರು ಸೂಪರ್ ಸಿಕ್ಸ್ ಸುತ್ತಿನಲ್ಲಿ ತಮ್ಮ ಎರಡೂ ಪಂದ್ಯಗಳನ್ನು ಗೆದ್ದಿದ್ದರು. ನಂತರ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಭಾರತದ ಈ ವಿಜಯ ರಥವನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಉದಯ್ ಸಹಾರನ್ ಟ್ರೋಫಿ ಎತ್ತಿ ಹಿಡಿಯಲಿ ಎಂದು ಹಾರೈಸಿದ್ದಾರೆ.

ಭಾರತವು ಈ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವಾಗಿದೆ. ಭಾರತ ತಂಡ ಒಂಬತ್ತನೇ ಬಾರಿಗೆ ಈ ಟೂರ್ನಿಯಲ್ಲಿ ಫೈನಲ್ ತಲುಪಿದೆ. ಐದು ಬಾರಿ ಪ್ರಶಸ್ತಿ ಗೆದ್ದಿದ್ದರೆ, ಮೂರು ಬಾರಿ ಸೋಲು ಕಂಡಿದ್ದಾರೆ. ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ನಂತರ ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಅವರು ಆರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಪೈಕಿ ಮೂರು ಬಾರಿ ಗೆದ್ದಿದ್ದಾರೆ. ಆಸ್ಟ್ರೇಲಿಯ ತಂಡವು ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಎರಡು ಬಾರಿ ಸೋತಿದೆ ಮತ್ತು ಎರಡೂ ಬಾರಿ ಅದು ಭಾರತದಿಂದ ಸೋತಿದೆ.

ಭಾರತ vs ಆಸ್ಟ್ರೇಲಿಯಾ ಫೈನಲ್ಫೈನಲ್ ಪಂದ್ಯವು ಫೆ.11 ರಂದು ಭಾನುವಾರ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ಮೂರನೇ ಬಾರಿಗೆ ಅಂಡರ್ -19 ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

Leave a Comment

Advertisements

Recent Post

Live Cricket Update