Advertisements

ಶಾ ಸ್ವಾಗತದ ವೇಳೆ ಬಿಜೆಪಿಯ ಮಾಜಿ ಶಾಸಕ, ಹಾಲಿ ಸಂಸದರ ಕಿತ್ತಾಟ

ಮೈಸೂರು: ಕ್ಲಸ್ಟರ್ ಮಟ್ಟದ ನಾಯಕರ ಲೈನ್ ಅಪ್ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತದ ವೇಳೆಯಲ್ಲೇ ಬಿಜೆಪಿಯ ಮಾಜಿ ಶಾಸಕ, ಹಾಲಿ ಸಂಸದರು ಕಿತ್ತಾಡಿಕೊಂಡ ಘಟನೆ ನಡೆದಿರೋದಾಗಿ ತಿಳಿದು ಬಂದಿದೆ.

ಮೈಸೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಿಧ ಕಾರ್ಯಕ್ರಮಗಳ ನಿಮಿತ್ತ ಆಗಮಿಸಿದ್ದಾರೆ. ಅವರನ್ನು ಸ್ವಾಗತ ಮಾಡುವುದಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಕ್ಲಸ್ಟರ್ ಮಟ್ಟದ ನಾಯಕರನ್ನು ಲೈನ್ ಅಪ್ ಮಾುವ ಹೊಣೆಗಾರಿಕೆ ನೀಡಲಾಗಿತ್ತು.

ಬಿಜೆಪಿ ನಾಯಕರ ಲೈನ್ ಅಪ್ ಪಟ್ಟಿಯನ್ನು ಗಮನಿಸಿದ ಸಂಸದ ಪ್ರತಾಪ್ ಸಿಂಹ ಅವರು, ಸ್ಥಳೀಯ ನಾಯಕರು ಪಟ್ಟಿಯಲ್ಲಿ ಇರದೇ ಇರುವುದರಿಂದ ಸಿಟ್ಟಾಗಿದ್ದಾರೆ. ಇದನ್ನು ನೇರವಾಗಿ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಭೇಟಿಯಾಗೇ ಪ್ರಶ್ನಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರ ಪ್ರಶ್ನೆಗೆ ತಾನು ಮಾಡಿದ್ದೇ ಸರಿ ಎನ್ನುವಂತೆ ಮಾಜಿ ಶಾಸಕ ಪ್ರೀತಂ ಗೌಡ ಉತ್ತರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತ ಸಂದರ್ಭದಲ್ಲಿಯೇ ಇಬ್ಬರು ಬಿಜೆಪಿ ನಾಯಕರ ನಡುವೆ ಮಾತಿನ ಜಟಾಪಡಿ ನಡೆದಿರುವುದಾಗಿ ತಿಳಿದು ಬಂದಿದೆ.

ಬಿಜೆಪಿಯ ಮಾಜಿ ಶಾಸಕ, ಹಾಲಿ ಸಂಸದರಿಬ್ಬರು ಕಿತ್ತಾಡಿಕೊಳ್ಳುತ್ತಿದ್ದದ್ದು ಗಮನಿಸಿದ ಸ್ಥಳದಲ್ಲಿದ್ದ ಬಿಜೆಪಿಯ ಇತರೆ ನಾಯಕರು, ಕೂಡಲೇ ಅವರನ್ನು ಸಮಾಧಾನಿಸಿದ್ದಾರೆ. ಈ ಬಳಿಕ ಅವರ ಮಾತಿನ ವಾಗ್ವಾದಕ್ಕೆ ಬ್ರೇಕ್ ಬಿದ್ದಿರುವುದಾಗಿ ತಿಳಿದು ಬಂದಿದೆ.

Leave a Comment

Advertisements

Recent Post

Live Cricket Update