Advertisements

ಬಾಂಬೆ ಮಿಠಾಯಿಯಲ್ಲಿ ರಾಸಾಯನಿಕ ಬಳಕೆ: ಪುದುಚೇರಿಯಲ್ಲಿ ನಿಷೇಧ

ಪುದುಚೇರಿ: ಕಳೆದ ಇಪ್ಪತ್ತು ವರ್ಷಗಳಿಂದ ಹೆಚ್ಚಾಗಿ ಮುನ್ನೆಲೆಗೆ ಬಂದ ಬಾಂಬೆ ಮಿಠಾಯಿ ತಿಸಿಸು ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ
ಅಚ್ಚುಮೆಚ್ಚಾಗಿತ್ತು.
ಇದೀಗ ಮಕ್ಕಳ ಮೆಚ್ಚಿನ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಲಾಗುತ್ತಿದೆ. ವಿಷಕಾರಿ ರಾಸಾಯನಿಕಗಳ ಬಳಕೆಯನ್ನು ಆಹಾರ ಅಧಿಕಾರಿಗಳು ಪತ್ತೆಹಚ್ಚಿದ್ದು, ಪುದುಚೇರಿ ಸರ್ಕಾರವು ಕಳೆದ ವಾರದಿಂದ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಿದೆ.
ಬಾಂಬೆ ಮಿಠಾಯಿಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ರೊಡಮೈನ್‌-ಬಿ ಎಂಬ ವಿಷಕಾರಿ ಅಂಶ ಪತ್ತೆಯಾಗಿರುವುದಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ವರದಿ ನೀಡಿದ್ದಾರೆ. ಹೀಗಾಗಿ ಪುದುಚೇರಿಯಾದ್ಯಂತ ಮಾರಾಟ ನಿಷೇಧಿಸಿರುವುದಾಗಿ ಲೆಫ್ಟಿನೆಂಟ್‌ ಗವರ್ನರ್‌ ತಮಿಳಿಸೈ ಸೌಂದರರಾಜನ್ ತಿಳಿಸಿದ್ದಾರೆ.
ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಮಕ್ಕಳಿಗೆ ಕಂಡಕಂಡಲ್ಲಿ ಕಾಟನ್‌ ಕ್ಯಾಂಡಿ ಕೊಡಿಸದಂತೆ ಹಾಗೂ ಖರೀದಿಸ ದಂತೆ ಜನರಿಗೆ ವಿನಂತಿಸಿಕೊಂಡಿದ್ದಾರೆ.

Leave a Comment

Advertisements

Recent Post

Live Cricket Update