Advertisements

ಭಾರತದ ಪ್ರವಾಸದಿಂದಲೇ ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಔಟ್

ಲಂಡನ್: ಎಡ ಮೊಣಕಾಲಿನ ಗಾಯಕ್ಕೆ ಒಳಗಾಗಿರುವ ಲೀಚ್ ಭಾರತದ ಪ್ರವಾಸದಿಂದಲೇ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಜಾಕ್ ಲೀಚ್ ಈಗ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಇನ್ನುಳಿದ 3 ಪಂದ್ಯಗಳಲ್ಲಿ ಆಡುವುದಿಲ್ಲ. ಸರಣಿಯು ಸದ್ಯ 1-1ರಿಂದ ಸಮಬಲದಲ್ಲಿದೆ.

ಇಂಗ್ಲೆಂಡ್ ಹೈದರಾಬಾದ್‌ ನಲ್ಲಿ ಆರಂಭಿಕ ಪಂದ್ಯವನ್ನು ಜಯಿಸಿದರೆ, ಭಾರತ ವಿಶಾಖಪಟ್ಟಣದಲ್ಲಿ 2ನೇ ಪಂದ್ಯವನ್ನು ಜಯಿಸಿ ತಿರುಗೇಟು ನೀಡಿದೆ.

ಲೀಚ್ ಇಂಗ್ಲೆಂಡ್ ಹೈದರಾಬಾದ್‌ ನಲ್ಲಿ ಆಡಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು.

ರಾಜ್ ಕೋಟ್‌ ನಲ್ಲಿ ಫೆ.15ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಗಿಂತ ಮೊದಲು ಇಂಗ್ಲೆಂಡ್ ತಂಡ ಅಬುಧಾಬಿಯಲ್ಲಿ ಬೀಡುಬಿಟ್ಟಿದ್ದು, ಲೀಚ್ ಮುಂದಿನ 24 ಗಂಟೆಗಳಲ್ಲಿ ಅಬುಧಾಬಿಯಿಂದ ಸ್ವದೇಶಕ್ಕೆ ಆಗಮಿಸಲಿದ್ದಾರೆ.

Leave a Comment

Advertisements

Recent Post

Live Cricket Update