Advertisements

ಕೆರೆ ಕಟ್ಟೆಗಳು ಮಾನವನಿಗಿಂತಲೂ ಪ್ರಾಣಿ ಸಂಕುಲಗಳಿಗೆ ಹತ್ತಿರ

ತಿಪಟೂರು: ಕೆರೆ ಕಟ್ಟೆಗಳು ಮಾನವನಿಗಿಂತಲೂ ಪ್ರಾಣಿ ಸಂಕುಲಗಳಿಗೆ ಹತ್ತಿರವಾಗಿದ್ದು, ಜಲಮೂಲಗಳ ಸಂರಕ್ಷಣೆ ಅತ್ಯಂತ ಮಹತ್ವ ವಾದದ್ದು ಜಲವಿಲ್ಲದಿದ್ದರೆ ಮಾನವನು ಸೇರಿದಂತೆ ಯಾವುದೇ ಪ್ರಾಣಿ ಪಕ್ಷಿಗಳು ಬದುಕಲು ಕಷ್ಟಕರ ಹಾಗಾಗಿ ಜಲಮೂಲಗಳ ಸಂರಕ್ಷಣೆಗೆ ಇಂದಿಗೂ ಹಾಗೂ ಮುಂದಿನ ಜನಾಂಗಕ್ಕೂ ಅವಶ್ಯಕತೆಯಾಗಿದ್ದು ಅವುಗಳ ರಕ್ಷಣೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ತಿಳಿಸಿದರು.

ತಾಲೂಕಿನ ಸುಕ್ಷೇತ್ರ ಕೆರಗೋಡಿ- ರಂಗಾಪುರ ಶ್ರೀ ಮಠದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಮಾಡಲಾದ ೬೧೦ ನೇ ಕೆರೆ ಹಸ್ತಾಂತರ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆರಗೋಡಿ-ರಂಗಾಪುರ ಶ್ರೀ ಕ್ಷೇತ್ರದ ಶಕ್ತಿ ಅಪಾರವಾಗಿದ್ದು, ಇಲ್ಲಿನ ಹಿಂದಿನ ಪೂಜ್ಯರಗಳ ತಪಸ್ಸಿನ ಫಲವಾಗಿ ಮಠವು ಶ್ರೇಯಸ್ಸುನ್ನು ಹೊಂದಿದ್ದು ಪರಮಪೂಜ್ಯರ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದು ಬಹಳ ಸಂತೋಷಕರ ವಾಗಿದ್ದು, ಜಲ ಇಲ್ಲದೆ ಯಾರೊಬ್ಬರೂ ಬದುಕಲು ಸಾಧ್ಯವಿಲ್ಲ ಅಗ್ನಿ, ವಾಯು, ಕೂಡ ಮುಖ್ಯ ಆದರೆ ನಾವು ಮುಖ್ಯವಾದವುಗಳನ್ನೇ ಮರೆಯುತ್ತಿದ್ದೇವೆ. ೨೦೨೨ ರಲ್ಲಿ ಉಂಟಾದ ಅತಿವೃಷ್ಟಿಯನ್ನು ನಾವೆಲ್ಲರೂ ನಮ್ಮ ಕಣ್ಣೆದುರೇ ನೋಡಿದ್ದೇವೆ ಕೆರೆ ಕುಂಟೆಗಳು ಕಾಲುವೆಗಳು ಸರಿಯಾಗಿದ್ದರೆ ನೀರು ಸರಿಯಾಗಿ ಹರಿಯುತ್ತದೆ ಅದರಿಂದ ಕೆರೆಕಟ್ಟೆಗಳ ಉಳಿವಿಗೆ ಸಂಸ್ಥೆಯ ಯೋಜನೆಯ ಮೂಲಕ ಕಾರ್ಯಕ್ರಮವನ್ನು ರೂಪಿಸಿದ್ದು ಇದಕ್ಕೆ ಗ್ರಾಮಸ್ಥರ ಸಹಕಾರವು ಮುಖ್ಯ ಎಂದರು.

ಗ್ರಾಮದ ಕೆರೆ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಹಲವಡೆ ಕೆರೆ ಅಭಿವೃದ್ಧಿ ಮಾಡಿದ ಬಳಿಕ ಕೆರೆ ಏರಿ ಮೇಲೆ ಹಸು ಕರುಗಳನ್ನು ಕಟ್ಟಿ ಹಾಕುವುದನ್ನು ನಾನು ನೋಡಿದ್ದೇನೆ ಇದರಿಂದ ಮಾಡಿದ ಕೆಲಸ ಸಾರ್ಥಕ ಆಗುವುದಿಲ್ಲ ನಿಮ್ಮೂರಿನ ಕೆರೆಯನ್ನು ನೀವೇ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈವರೆಗೆ ರಾಜ್ಯಾದ್ಯಂತ ೬೭೨ ಕೆರೆಗಳನ್ನು ಅಭಿವೃದ್ಧಿ ಮಾಡಿದ್ದು ತುಮಕೂರು ಜಿಲ್ಲೆಯಲ್ಲಿ ಈವರೆಗೆ ೫೩ ಕೆರೆಗಳನ್ನು ಅಭಿವೃದ್ಧಿ ಮಾಡಿದ್ದು ತಿಪಟೂರು ತಾಲೂಕಿನಲ್ಲಿ ಈವರೆಗೆ ೭ ಕೆರೆಗಳನ್ನು ಅಭಿವೃದ್ಧಿ ಮಾಡಿರುವ ಹೆಗ್ಗಳಿಕೆ ಸಂಸ್ಥೆಗೆ ಸಲ್ಲುತ್ತದೆ.

ಈ ಸಂದರ್ಭದಲ್ಲಿ ಸುಕ್ಷೇತ್ರ ಕೆರಗೋಡಿ ರಂಗಾಪುರ ಮಠದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು ಮಾತನಾಡುತ್ತಾ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸಲುವಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಯೋಜನೆಯನ್ನು ರೂಪಿಸುವ ಮೂಲಕ ಅಂತರ್ಜಲ ವೃದ್ಧಿಯ ಜೊತೆಗೆ ಬರಗಾಲದಲ್ಲಿಯೂ ರೈತರ, ಪ್ರಾಣಿ, ಪಕ್ಷಿಗಳ ದಾಹವನ್ನು ನೀಗಿಸಲು ಸಲುವಾಗಿ ಕೆರೆ-ಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ ನೀರು ನಿಲ್ಲುವಂತೆ ಮಾಡುವಂತಹ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಪ್ರತಿಯೊಂದು ಗ್ರಾಮದಲ್ಲಿಯೂ ಇರುವಂತಹ ಕೆರೆಗಳನ್ನು ಜನಸಾ ಮಾನ್ಯರ ಸಹಕಾರದಿಂದಲೇ ಅಭಿವೃದ್ಧಿ ಪಡಿಸಲು ಮುಂದಾದಾಗ ಮಾತ್ರವೇ ಅಂತರ್ಜಲವನ್ನು ವೃದ್ಧಿಸಿ ಉತ್ತಮ ಜೀವನ ನಿರ್ವಹಣೆ ಸಾಧ್ಯ ವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನೀರಿನ ಸಂರಕ್ಷಣೆಗೆ ಮುಂದಾಗಬೇಕಿದೆ.

ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಶ್ರೀಮಠಕ್ಕೆ ಆಗಮಿಸಿರುವುದು ನಮ್ಮೆಲ್ಲರ ಪುಣ್ಯ ಧರ್ಮಸ್ಥಳ ಸಂಸ್ಥೆ ವತಿಯಿಂದ ಮಠದ ಆವರಣ ದಲ್ಲಿ ಕೆರೆಯ ಹೂಳೆತ್ತುವ ಕೆಲಸ ಮಾಡಿ ಕೆರೆಯನ್ನು ಅಭಿವೃದ್ಧಿ ಮಾಡಿ ನೀಡಿದ್ದು ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಸಂಸ್ಥೆಯು ಸರ್ಕಾರ ಮಾಡದ ಕೆಲಸಗಳನ್ನು ಮಾಡುತ್ತಿದ್ದು ಸಂಸ್ಥೆಗೆ ಚಿರಋಣಿ ಎಂದು ಹರ್ಷವನ್ನು ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಳೀಯ ಯೋಜನಾಧಿಕಾರಿಗಳಾದ ಉದಯ್ ಕೆ, ಸುರೇಶ್, ಮಠದ ಪದಾಧಿಕಾರಿಗಳು, ಕೆರೆ ಸಮಿತಿ ಅಧ್ಯಕ್ಷ ಮನೋಹರ್‌ ರಂಗಾಪುರ, ಖಜಾಂಚಿ ಶಂಕರಮೂರ್ತಿ, ಉಪಾಧ್ಯಕ್ಷ ರಾಜಶೇಖರ್ ಮಠದಮನೆ ಕೆರೆ ಸಮಿತಿಯ ಪದಾಧಿಕಾರಿಗಳಾದ ಚಂದ್ರ ಶೇಖರ್, ಷಡಕ್ಷರಿ, ವಿಶ್ವ ನಾಥ್, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾ ಪಂ ಸದಸ್ಯ ಜಯಣ್ಣ, ಊರಿನ ಗ್ರಾಮಸ್ಥರು, ಸಂಸ್ಥೆಯ ಕಾರ್ಯಕರ್ತರು ಹಾಜರಿದ್ದರು.

ರಂಗಾಪುರ ಸುಕ್ಷೇತ್ರ ಭೇಟಿ. ಮಠದ ಪರಮಪೂಜ್ಯ ಗದ್ದುಗೆ ದರ್ಶನ ಪಡೆದು, ರಂಗನಾಥ ಸ್ವಾಮಿ ದೇವಾಲಯದ ದರ್ಶನ ಪಡೆದರು. ನಂತರ ಸುಮಾರು 14ಲಕ್ಷದ ಮೊತ್ತದ ಕಾಮಗಾರಿ ಕೆರೆಯ ಹಸ್ತಾಂತರ ಮಾಡಿದರು

*

ಗ್ರಾಮದ ಕೆರೆ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಹಲವಡೆ ಕೆರೆ ಅಭಿವೃದ್ಧಿ ಮಾಡಿದ ಬಳಿಕ ಕೆರೆ ಏರಿ ಮೇಲೆ ಹಸು ಕರುಗಳನ್ನು ಕಟ್ಟಿ ಹಾಕುವು ದನ್ನು ನಾನು ನೋಡಿದ್ದೇನೆ ಇದರಿಂದ ಮಾಡಿದ ಕೆಲಸ ಸಾರ್ಥಕ ಆಗುವುದಿಲ್ಲ ನಿಮ್ಮೂರಿನ ಕೆರೆಯನ್ನು ನೀವೇ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡ ಬೇಕು.

ಡಾ. ಡಿ ವೀರೇಂದ್ರ ಹೆಗ್ಗಡೆಯವರು. ಧರ್ಮಾಧಿಕಾರಿಗಳು ಧರ್ಮಸ್ಥಳ.

ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸಲುವಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಯೋಜನೆಯನ್ನು ರೂಪಿಸುವ ಮೂಲಕ ಅಂತರ್ಜಲ ವೃದ್ಧಿಯ ಜೊತೆಗೆ ಬರಗಾಲದಲ್ಲಿಯೂ ರೈತರ, ಪ್ರಾಣಿ, ಪಕ್ಷಿಗಳ ದಾಹವನ್ನು ನೀಗಿಸಲು ಸಲುವಾಗಿ ಕೆರೆ-ಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ ನೀರು ನಿಲ್ಲುವಂತೆ ಮಾಡುವಂತಹ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ.
ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿಯವರು ಕೆರಗೋಡಿ-ರಂಗಾಪುರ

Leave a Comment

Advertisements

Recent Post

Live Cricket Update