Advertisements

ಫೆ.17 ರವರೆಗೆ ಮದ್ಯಮಾರಾಟಕ್ಕೆ ನಿರ್ಬಂಧ

ಬೆಂಗಳೂರು : ಇಂದಿನಿಂದ ಫೆ. 17 ರವರೆಗೆ ಬೆಂಗಳೂರಿನಲ್ಲಿ ಮದ್ಯಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.

ಯಾವುದೇ ಬಾರ್‌ ಮತ್ತು ರೆಸ್ಟುರೆಂಟ್‌ ಗಳು, ಎಂಆರ್‌ಪಿ ಮಳಿಗೆಗಳು ಹಾಗೂ ಎಂಎಸ್‌ಐಎಲ್‌ ಕೇಂದ್ರಗಳಲ್ಲಿಯೂ ಸಹ ಮದ್ಯ ಮಾರಾಟ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಅಕ್ರಮ ಮದ್ಯ ಮಾರಾಟಗಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬುಧವಾರ ಪ್ರೇಮಿಗಳ ದಿನ ಸಹ ಆಚರಿಸಲ್ಪಡುತ್ತಿದ್ದು, ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿರುವ ಕ್ರಮದ ಕುರಿತು ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಮಾಲಿಕರ ಸಂಘದಿಂದ ಆಕ್ಷೇಪ ವ್ಯಕ್ತವಾಗಿತ್ತು.

Leave a Comment

Advertisements

Recent Post

Live Cricket Update