Advertisements

ಕೈ ಕೈ ಹಿಡಿದು ಕೊಂಡು ಪ್ರಾಣ ಬಿಟ್ಟ ಈ ದಂಪತಿ..!

ನೆದರ್ಲ್ಯಾಂಡ್: ಡಚ್ ಮಾಜಿ ಪ್ರಧಾನಿ ಡ್ರೈಸ್ ವ್ಯಾನ್ ಆಗ್ಟ್ ಅವರು ತಮ್ಮ ಪತ್ನಿ ನಿಜ್ಮೆಗನ್‌, ಈ ದಂಪತಿ ಪರಸ್ಪರ ಕೈ ಕೈ ಹಿಡಿದು ಕೊಂಡು ಪ್ರಾಣ ಬಿಟ್ಟಿದ್ದಾರೆ.

93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿಗೆ ದಯಾಮರಣಕ್ಕೆ ಅನುಮತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ದಯಾ ಮರಣದ ಮೂಲಕ ಜತೆಯಾಗಿಯೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ಆಗ್ಟ್ ಮತ್ತು ಅವರ ಪತ್ನಿ ಇಬ್ಬರೂ ಸಾಯುವ ಮೊದಲು ಸ್ವಲ್ಪ ಸಮಯ ಮೊದಲು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಇವರಿಬ್ಬರೂ ಪರಸ್ಪರ ಬೆಂಬಲದೊಂದಿಗೆ ಸುಮಾರು 70 ವರ್ಷಗಳ ಕಾಲ ಜೊತೆಯಾಗಿದ್ದರು. ಸಾಯುವವರೆಗೂ ಪತ್ನಿಯನ್ನು ಸದಾ ನನ್ನ ಹುಡುಗಿ ಎಂದು ಕರೆಯುತ್ತಿದ್ದರು. ಇವರ ಅಂತ್ಯಸಂಸ್ಕಾರ ಕಾರ್ಯವೂ ಖಾಸಗಿಯಾಗಿ ನಡೆದಿದೆ.

ಡ್ರೈಸ್ ವ್ಯಾನ್ ಆಗ್ಟ್ ಅವರು 1977ರಿಂದ 1982ರವರೆಗೆ ನೆದರ್ಲ್ಯಾಂಡ್‌ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೇ ಸಮಯದಲ್ಲಿ ಅವರು ಅಲ್ಲಿನ ಕ್ರಿಶ್ಚಿಯನ್ ಡೆಮಾಕ್ರಟಿಕ್ ಅಪೀಲ್ ಪಕ್ಷದ ಸ್ಥಾಪಕ ನಾಯಕರಾದರು. 2009ರಲ್ಲಿ ಇವರು ದಿ ರೈಟ್ಸ್ ಫೋರಮ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

Leave a Comment

Advertisements

Recent Post

Live Cricket Update