Advertisements

15 ವರ್ಷಗಳಿಂದ ವಧುಗಾಗಿ ಹುಡುಕಾಟ: ಪ್ರೇಮಿಗಳ ದಿನದಂದು ವಿವಾಹ

ತ್ತರಪ್ರದೇಶ: ಇಲ್ಲೊಬ್ಬ ಯುವಕ 15 ವರ್ಷಗಳಿಂದ ವಧುಗಾಗಿ ಹುಡುಕಾಡಿ ಕೊನೆಗೂ ಮದುವೆಯಾಗಿದ್ದಾನೆ.

ಮೊಹಮ್ಮದ್ ಅರ್ಷದ್ ವಧುಗಾಗಿ 15 ವರ್ಷಗಳ ಹುಡುಕಾಡಿ 10 ನಿರಾಕರಣೆಗಳ ನಂತರ, ಮ್ಯಾಚ್​ ಆಗುವ ಹುಡುಗಿಯನ್ನು ಕಂಡುಕೊಂಡಿ ದ್ದಾನೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಸಯಾನಾ ನಗರದ 35 ವರ್ಷದ ಮೊಹಮ್ಮದ್ ಅರ್ಷದ್ ಪೀಠೋಪಕರಣ ವ್ಯಾಪಾರ ಮಾಡು ತ್ತಿದ್ದು, ಅವರು ಕೇವಲ 3.7 ಅಡಿ ಎತ್ತರ ಬೆಳೆದರು. 15 ವರ್ಷಗಳ ಕಾದಾಟದ ನಂತರ ಅರ್ಷದ್‌ಗೆ ಸರಿಯಾದ ಜೀವನ ಸಂಗಾತಿ ಸಿಕ್ಕಿದ್ದಾಳೆ.

ಅರ್ಷದ್ ಸ್ಥಿತಿ ಕಂಡು ಕುಟುಂಬಸ್ಥರೂ ಚಿಂತಾಕ್ರಾಂತರಾಗಿದ್ದರು. ಸಂಬಂಧಿಕರೊಬ್ಬರು 4 ಅಡಿ ಎತ್ತರದ ಸೋನಾ ಬಗ್ಗೆ ಹೇಳಿದ್ದರು. ನಂತರ ಅರ್ಷದ್ ಕುಟುಂಬಸ್ಥರು ತೆರಳಿ ಸೋನಾ ಮನೆಯವರ ಬಳಿ ಮಾತುಕತೆ ನಡೆಸಿದ್ದಾರೆ. ಅವರು ಅಂತಿಮವಾಗಿ ಪ್ರೇಮಿಗಳ ದಿನದಂದು 30 ವರ್ಷದ ಸೋನಾ ಅವರನ್ನು ವಿವಾಹವಾದರು. ಅರ್ಷದ್ ಗೆಳೆಯರು ನಗರದೆಲ್ಲೆಡೆ ಸಿಹಿ ಹಂಚಿ ಸಂಭ್ರಮಿಸಿದರು.

Leave a Comment

Advertisements

Recent Post

Live Cricket Update