Advertisements

ಮಹಾದೇವ್ ಆನ್ಲೈನ್ ಗೇಮಿಂಗ್ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

ವದೆಹಲಿ : ಮಹಾದೇವ್ ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಅಪ್ಲಿಕೇಶನ್ನ ಅಕ್ರಮ ಕಾರ್ಯಾಚರಣೆಗೆ ಸಂಬಂಧಿಸಿ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.

ಮನಿ ಲಾಂಡರಿಂಗ್ ತಡೆ ಕಾಯ್ದೆ ಅಡಿಯಲ್ಲಿ ನಿತೀಶ್ ದಿವಾನ್ ನನ್ನು ರಾಯ್ಪುರದಲ್ಲಿ ಬಂಧಿಸಲಾಯಿತು ಮತ್ತು ವಿಶೇಷ ನ್ಯಾಯಾಲಯವು ಆರೋಪಿ ಯನ್ನು ಫೆ.24 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದೆ.

ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಈವರೆಗೆ 9 ಆರೋಪಿಗಳನ್ನು ಬಂಧಿಸಿದೆ.

ಕೋಲ್ಕತಾ ನಿವಾಸಿ ನಿತಿನ್ ತಿಬ್ರೆವಾಲ್, ರಾಯ್ಪುರ ನಿವಾಸಿ ಅಮಿತ್ ಅಗರ್ವಾಲ್, ಕ್ಯಾಶ್ ಕೊರಿಯರ್ ಅಸಿಮ್ ದಾಸ್, ಪೊಲೀಸ್ ಕಾನ್ಸ್ಟೇಬಲ್ ಭೀಮ್ ಸಿಂಗ್ ಯಾದವ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಚಂದ್ರ ಭೂಷಣ್ ವರ್ಮಾ, ಹವಾಲಾ ಆಪರೇಟರ್ ಸಹೋದರರಾದ ಅನಿಲ್ ಮತ್ತು ಸುನಿಲ್ ದಮ್ಮಾನಿ ಮತ್ತು ಸತೀಶ್ ಚಂದ್ರಕರ್ ಎಂಬ ವ್ಯಕ್ತಿಯನ್ನು ಸಿಬಿಐ ಈ ಹಿಂದೆ ಬಂಧಿಸಿತ್ತು.

Leave a Comment

Advertisements

Recent Post

Live Cricket Update