ವೆಲ್ಲಿಂಗ್ಟನ್: ವೆಸ್ಟ್ ಇಂಡೀಸ್-ಯುಎಸ್ಎ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ನಿಂದ ನ್ಯೂಝಿಲೆಂಡ್ ತಂಡದ ಸ್ಟಾರ್ ಆಟಗಾರ ಹೊರಬಿದ್ದಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿರು ಕಿವೀಸ್ ವೇಗಿ ಒಂದು ವರ್ಷಗಳ ಕಾಲ ಮೈದಾನದಿಂದ ಹೊರಗುಳಿಯುವ ಸಾಧ್ಯತೆಯಿದೆ. ತಂಡದ ಪ್ರಮುಖ ವೇಗಿ ಕೈಲ್ ಜೇಮಿಸನ್ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಅವರು ಮುಂಬರುವ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಕೈಲ್ ಜೇಮಿಸನ್ ಭರ್ಜರಿ ಪ್ರದರ್ಶನ ನೀಡಿದ್ದರು. ಪಂದ್ಯದ ಕೊನೆಯ ದಿನದಾಟದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.
ವೈದ್ಯಕೀಯ ಪರೀಕ್ಷೆಗೆ ಒಳಗಾಗಿರುವ ಕೈಲ್ ಜೇಮಿಸನ್ ಅವರ ಬೆನ್ನು ನೋವಿನ ಸಮಸ್ಯೆಯು ಗಂಭೀರ ಎಂದು ತಿಳಿದು ಬಂದಿದೆ. ಸ್ಕ್ಯಾನಿಂಗ್ ವೇಳೆ ಅವರ ಬೆನ್ನಿನ ಮೂಳೆಯಲ್ಲಿ ಮುರಿತ ಕಂಡು ಬಂದಿದ್ದು, ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸೂಚಿಸಿದ್ದಾರೆ.
ಏಕೆಂದರೆ ಕಳೆದ ವರ್ಷ ಕೂಡ ಇದೇ ಸಮಸ್ಯೆಯಿಂದಾಗಿ ಅವರು ಏಕದಿನ ವಿಶ್ವಕಪ್ ಹಾಗೂ ಹಲವು ಸರಣಿಗಳನ್ನು ತಪ್ಪಿಸಿಕೊಂಡಿದ್ದರು.