Advertisements

ರವಿಚಂದ್ರನ್ ಅಶ್ವಿನ್ ಬದಲಿಗೆ ದೇವದತ್ ಪಡಿಕ್ಕಲ್ ಫೀಲ್ಡಿಂಗ್‌…!

ರಾಜ್​ಕೋಟ್: ​ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಹೊರಗುಳಿದಿ ದ್ದಾರೆ. ಅವರ ಬದಲಿಗೆ ಭಾರತದ ಪರ ಸಬ್​ಟ್ಯೂಟ್ ಫೀಲ್ಡರ್ ಆಗಿ ಕರ್ನಾಟಕದ ಆಟಗಾರ ದೇವದತ್ ಪಡಿಕ್ಕಲ್ ಕಣಕ್ಕಿಳಿದಿದ್ದಾರೆ.

ರಾಜ್​ಕೋಟ್​ನ ನಿರಂಜನ್ ಶಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕಿಳಿದಿದ್ದಾರೆ.

ವೈಯುಕ್ತಿಕ ಕಾರಣಗಳಿಂದಾಗಿ ಅಶ್ವಿನ್ 3ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು, ಈಗಾಗಲೇ ಚೆನ್ನೈಗೆ ತಲುಪಿದ್ದಾರೆ. ಅವರ ತಾಯಿಯು ಅನಾರೋಗ್ಯ ದಿಂದ ಬಳಲುತ್ತಿದ್ದು, ಹೀಗಾಗಿ ಅವರು ದಿಢೀರ್ ತಂಡವನ್ನು ತೊರೆದಿದ್ದಾರೆ ಎಂದು ತಿಳಿದು ಬಂದಿದೆ.

ಅದರಂತೆ ಇದೀಗ ರವಿಚಂದ್ರನ್ ಅಶ್ವಿನ್ ಬದಲಿಗೆ ಸಬ್ಸ್​ಟ್ಯೂಟ್ ಫೀಲ್ಡರ್ ಆಗಿ ದೇವದತ್ ಪಡಿಕ್ಕಲ್ ಕಣಕ್ಕಿಳಿದಿದ್ದಾರೆ.

ದೇವದತ್ ಪಡಿಕ್ಕಲ್ ಮೂರನೇ ಟೆಸ್ಟ್ ಪಂದ್ಯಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದರು. ತೊಡೆಸಂಧು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕೆಎಲ್ ರಾಹುಲ್ ಬದಲಿಗೆ ಪಡಿಕ್ಕಲ್​ಗೆ ಸ್ಥಾನ ನೀಡಲಾಗಿದೆ. ಅ

ಇದಾಗ್ಯೂ ದೇವದತ್ ಪಡಿಕ್ಕಲ್​ಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಅವಕಾಶ ಇರುವುದಿಲ್ಲ. ಏಕೆಂದರೆ ಐಸಿಸಿ ನಿಯಮದ ಪ್ರಕಾರ ಕೋವಿಡ್ ಕಾರಣ ಅಥವಾ ಗಾಯದ ಕಾರಣ ಆಟಗಾರನೊಬ್ಬ ಪ್ಲೇಯಿಂಗ್ ಇಲೆವೆನ್​ನಿಂದ ಹೊರಗುಳಿದರೆ ಮಾತ್ರ ಬದಲಿ ಆಟಗಾರ ತಂಡದ ಪರ ಆಡಬಹುದು.

Leave a Comment

Advertisements

Recent Post

Live Cricket Update