Advertisements

ರಾಂಚಿಯಲ್ಲಿ ನಾಲ್ಕನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ಬದಲಾವಣೆ

ರಾಂಚಿ: ಅತಿಥೇಯ ಭಾರತ ವಿರುದ್ಧ ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ.

ಮಾರ್ಕ್ ವುಡ್ ಹಾಗೂ ರೆಹಾನ್ ಅಹ್ಮದ್ ಅವರನ್ನು ಕೈಬಿಡಲಾಗಿದ್ದು, ಓಲಿ ರಾಬಿನ್ಸನ್ ಹಾಗೂ ಶೋಯಬ್ ಬಷೀರ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಸರಣಿ ಗೆಲ್ಲಲು ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಆಂಗ್ಲರ ಪಡೆ ಸಿಲುಕಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಫೆ.23ರಂದು ಆರಂಭವಾಗಲಿದೆ.

ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್ ಅಂತರದ ಬೃಹತ್ ಗೆಲುವು ದಾಖಲಿಸಿತ್ತು. ಇದು ಟೆಸ್ಟ್ ಇತಿಹಾಸದಲ್ಲಿ ಭಾರತದ ಬೃಹತ್ (ರನ್ ಅಂತರದಲ್ಲಿ) ಗೆಲುವು ಆಗಿದೆ. ಇನ್ನೊಂದು ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.

ಇಂಗ್ಲೆಂಡ್ ಆಡುವ ಬಳಗ ಇಂತಿದೆ:

1. ಬೆನ್ ಸ್ಟೋಕ್ಸ್ (ನಾಯಕ)

2. ಜಾಕ್ ಕ್ರಾಲಿ

3. ಬೆನ್ ಡಕೆಟ್

4. ಓಲಿ ಪೋಪ್

5. ಜೋ ರೂಟ್

6. ಜಾನಿ ಬೆಸ್ಟೊ

7. ಬೆನ್ ಫೋಕ್ಸ್ (ವಿಕೆಟ್ ಕೀಪರ್)

8. ಟಾಮ್ ಹಾರ್ಟ್ಲಿ

9. ಓಲಿ ರಾಬಿನ್ಸನ್

10. ಜೇಮ್ಸ್ ಆಯಂಡರ್ಸನ್

11. ಶೋಯಬ್ ಬಷೀರ್

ಮೊದಲ ಮೂರು ಪಂದ್ಯಗಳ ಫಲಿತಾಂಶ:

ಮೊದಲ ಟೆಸ್ಟ್ (ಹೈದರಾಬಾದ್): ಇಂಗ್ಲೆಂಡ್‌ಗೆ 28 ರನ್ ಗೆಲುವು

2ನೇ ಟೆಸ್ಟ್ (ವಿಶಾಖಪಟ್ಟಣ): ಭಾರತಕ್ಕೆ 106 ರನ್ ಗೆಲುವು

3ನೇ ಟೆಸ್ಟ್ (ರಾಜ್‌ಕೋಟ್): ಭಾರತಕ್ಕೆ 434 ರನ್ ಗೆಲುವು

Leave a Comment

Advertisements

Recent Post

Live Cricket Update