Advertisements

ಅಲಸ್ಟೇರ್ ಕುಕ್ ದಾಖಲೆ ಮುರಿದ ಜೋ ರೂಟ್

ರಾಂಚಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ನ ಮಾಜಿ ನಾಯಕ ಜೋ ರೂಟ್ ತಮ್ಮ ಬ್ಯಾಟಿಂಗ್ ಫಾರ್ಮ್​ಗೆ ಮರಳಿದ್ದಾರೆ. ಜೋ ರೂಟ್ ಪ್ರಸ್ತುತ ನಡೆಯುತ್ತಿರುವ ರೆಡ್ ಬಾಲ್ ಸರಣಿಯಲ್ಲಿ ತಮ್ಮ ಮೊದಲ ಶತಕ ದಾಖಲಿಸಿದ್ದಾರೆ.

ಅರ್ಧ ಶತಕ ಬಾರಿಸಿದ ತಕ್ಷಣ ಈ ಹಿಂದೆ ಅಲಸ್ಟೇರ್ ಕುಕ್ ಸಾಧಿಸಿದ್ದ ಗಮನಾರ್ಹ ಮೈಲಿಗಲ್ಲನ್ನು ಮೀರಿಸಿದರು.

ಸರಣಿಯ ನಾಲ್ಕನೇ ಟೆಸ್ಟ್​​ಗೆ ಮುನ್ನ ರೂಟ್ ಫಾರ್ಮ್​ ಕಾರಣಕ್ಕೆ ಟೀಕೆಗಳನ್ನು ಎದುರಿಸಿದ್ದರು. ಆದಾಗ್ಯೂ, ಬಲಗೈ ಬ್ಯಾಟ್ಸ್ಮನ್ ಫೆ.23ರ ಶುಕ್ರವಾರ ಇಂಗ್ಲೆಂಡ್​ನ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಉತ್ತಮ ಯೋಜಿತ ಶತಕ ಬಾರಿಸುವ ಮೂಲಕ ತನ್ನ ಟೀಕಾಕಾರರನ್ನು ಮೌನಗೊಳಿಸಿದರು.

ಬೆನ್ ಡಕೆಟ್ ಮತ್ತು ಒಲಿ ಪೋಪ್ ಔಟ್ ಆದ ಬಳಿಕ 33 ವರ್ಷದ ಬ್ಯಾಟರ್​ 10ನೇ ಓವರ್​ನ ಕ್ರೀಸ್​ಗೆ ಬಂದರು. ಜೋ ರೂಟ್ ಮತ್ತು ಜಾನಿ ಬೇರ್​​ಸ್ಟೋವ್​ ನಾಲ್ಕನೇ ವಿಕೆಟ್ಗೆ 52 ರನ್​ಗಳ ಜೊತೆಯಾಟ ನೀಡಿದರು. ರವಿಚಂದ್ರನ್ ಅಶ್ವಿನ್ ಬೇರ್​ಸ್ಟೋವ್ ರನ್ನು ಅನ್ನು ಔಟ್ ಮಾಡುವ ಮೂಲಕ ಜತೆಯಾಟ ಮುರಿದರು. ಬೇರ್​ಸ್ವೋವ್​​ 35 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 38 ರನ್ ಗಳಿಸಿದ್ದರು.

ಊಟದ ವಿರಾಮದ ಮೊದಲು ರವೀಂದ್ರ ಜಡೇಜಾ ಕೇವಲ ಮೂರು ರನ್ ಗಳಿಸಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ವಿಕೆಟ್ ಪಡೆದರು. ಬಳಿಕ ವಿಕೆಟ್ ಕೀಪರ್-ಬ್ಯಾಟ್​​ ಬೆನ್ ಫೋಕ್ಸ್ ಅವರೊಂದಿಗೆ ನಿರ್ಣಾಯಕ ಪಾಲುದಾರಿಕೆ ಪಡೆದ ಜೋ ರೂಟ್ ಇನ್ನಿಂಗ್ಸ್ ಇಂಗ್ಲೆಂಡ್ ಇನಿಂಗ್ಸ್​ ಸ್ಥಿರಗೊಳಿಸಿದರು. ಅಲ್ಲದೆ 108 ಎಸೆತಗಳಲ್ಲಿ ಅರ್ಧಶತಕ ದಾಟಿದರು.

ಈ ಮೂಲಕ ಇಂಗ್ಲೆಂಡ್ ಪರ ಅತಿ ಹೆಚ್ಚು ಬಾರಿ ಅರ್ಧ ಶತಕ ಬಾರಿಸಿದ ಅಲೆಸ್ಟರ್ ಕುಕ್ ದಾಖಲೆಯನ್ನು ಜೋ ರೂಟ್ ಮುರಿದಿದ್ದಾರೆ. ನಾಲ್ಕನೇ ಕ್ರಮಾಂಕದ ಬ್ಯಾಟರ್​​ ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮ 91 ನೇ 50 ಪ್ಲಸ್ ಸ್ಕೋರ್ ಪೂರ್ಣಗೊಳಿಸಿದರು. ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್​​ನಲ್ಲಿ 90 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿರುವ ಕುಕ್ ಎರಡನೇ ಸ್ಥಾನದಲ್ಲಿದ್ದಾರೆ.

Leave a Comment

Advertisements

Recent Post

Live Cricket Update