ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಒಕ್ಕೂಟವಾದ ಬಿಜೆಪಿ ಬಣವನ್ನ ಗುರಿಯಾಗಿಸಿಕೊಂಡರು. ಇಂಡಿಯಾ ಮೈತ್ರಿ ಅವರ ಪರಿವಾರಕ್ಕಾಗಿ ಕೆಲಸ ಮಾಡುತ್ತದೆಯೇ ಹೊರತು ಬಡವರ ಕಲ್ಯಾಣಕ್ಕಾಗಿ ಅಲ್ಲ ಎಂದು ಹೇಳಿದರು.
“ಇಂದು ದೇಶದ ಪ್ರತಿಯೊಬ್ಬ ದಲಿತ ಮತ್ತು ಪ್ರತಿಯೊಬ್ಬ ಹಿಂದುಳಿದ ವ್ಯಕ್ತಿಯು ಇನ್ನೂ ಒಂದು ವಿಷಯವನ್ನ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಮ್ಮ ದೇಶದಲ್ಲಿ, ಜಾತಿಯ ಹೆಸರಿನಲ್ಲಿ ಪ್ರಚೋದನೆ ಮತ್ತು ಹೋರಾಟದಲ್ಲಿ ನಂಬಿಕೆ ಹೊಂದಿರುವ ಇಂಡಿ ಮೈತ್ರಿಕೂಟದ ಜನರು ದಲಿತರು ಮತ್ತು ವಂಚಿತರ ಅನುಕೂಲಕ್ಕಾಗಿ ಯೋಜನೆಗಳನ್ನ ವಿರೋಧಿಸುತ್ತಾರೆ. ಬಡವರ ಕಲ್ಯಾಣದ ಹೆಸರಿನಲ್ಲಿ, ಈ ಜನರು ತಮ್ಮ ಕುಟುಂಬಕ್ಕಾಗಿ ರಾಜಕೀಯ ಮಾಡುತ್ತಾರೆ” ಎಂದು ಪ್ರಧಾನಿ ಹೇಳಿದರು.
ಸಂತ ರವಿದಾಸ್ ಅವರ 647ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ನಮ್ಮ ಸರ್ಕಾರ ಸಂತ ರವಿದಾಸ್ ಜಿ ಅವರ ವಿಚಾರಗಳನ್ನ ಮುಂದಕ್ಕೆ ಕೊಂಡೊಯ್ಯುತ್ತಿದೆ. ಬಿಜೆಪಿ ಸರ್ಕಾರ ಎಲ್ಲರಿಗೂ ಇದೆ, ಬಿಜೆಪಿ ಸರ್ಕಾರದ ಯೋಜನೆಗಳು ಎಲ್ಲರಿಗೂ ಇವೆ” ಎಂದು ಹೇಳಿದರು. “ಇಂದು, ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯತ್ನ’ ಎಂಬ ಮಂತ್ರವು 140 ಕೋಟಿ ದೇಶವಾಸಿ ಗಳೊಂದಿಗೆ ಸಂಪರ್ಕ ಸಾಧಿಸುವ ಮಂತ್ರವಾಗಿದೆ” ಎಂದು ಅವರು ಹೇಳಿದರು.