Advertisements

ರಸ್ತೆ ಅಪಘಾತದಲ್ಲಿ ಬಿಆರ್‌ಎಸ್ ಶಾಸಕಿ ಸಾವು

ಹೈದರಾಬಾದ್‌: ತೆಲಂಗಾಣದ ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತಾ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಹೈದರಾಬಾದ್‌ನ ಒಆರ್‌ಆರ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಲಾಸ್ಯ ಅವರ ಕಾರ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕಾರ್ ವೇಗ ಮಿತಿ ಮೀರಿದ್ದು, ಡಿವೈಡರ್‌ಗೆ ಡಿಕ್ಕಿಯಾಗಿ ಲಾಸ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾಸ್ಯ ಅವರ ನಿಧನಕ್ಕೆ ಬಿಆರ್‌ಎಸ್ ನಾಯಕರು ಕಂಬನಿ ಮಿಡಿದ್ದಾರೆ.

ಸಣ್ಣ ವಯಸ್ಸಿನಲ್ಲಿ ಲಾಸ್ಯ ನಿಧನರಾಗಿದ್ದು ನೋವು ತಂದಿದೆ ಎಂದಿದ್ದಾರೆ. ನಂದಿತಾಗೆ ಹಲವು ದಿನಗಳಿಂದ ಒಂದಲ್ಲಾ ಒಂದು ಸಮಸ್ಯೆ ಬಾಧಿಸುತ್ತಲೇ ಇತ್ತು. ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ನಂತರ ಲಿಫ್ಟ್‌ನಲ್ಲಿ ಸಿಕ್ಕುಹಾಕಿಕೊಂಡಿದ್ದರು. ಮತ್ತೊಮ್ಮೆ ಅವರ ಕಾರ್ ಅಪಘಾತಕ್ಕೀಡಾಗಿದ್ದು, ಸ್ವಲ್ದರಲ್ಲೇ ಬಚಾವ್ ಆಗಿದ್ದರು. ಆದರೆ ಇದೀಗ ಕಾರ್ ಡಿವೈಡರ್‌ಗೆ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

Leave a Comment

Advertisements

Recent Post

Live Cricket Update