ಬೆಂಗಳೂರು: ಪೆಪ್ಸಿಕೋ ದ ಹೆಮ್ಮೆಯ ಪಾನೀಯವಾಗಿರುವ ಸ್ಲೈಸ್ ಅನ್ನು ಈ ಬಾರಿಯ ಬೇಸಿಗೆಯಲ್ಲಿ ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ನಟಿ ನಯನತಾರಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಅನ್ನಾಗಿ ನೇಮಕ ಮಾಡಲಾಗಿದೆ.
ನಯನತಾರಾ ಅವರನ್ನು ರಾಯಭಾರಿಯನ್ನಾಗಿ ಮಾಡಿಕೊಳ್ಳುವ ಮೂಲಕ ದೇಶದ ಮಾವಿನಹಣ್ಣಿನ ಪ್ರಿಯರಿಗೆ ಇನ್ನಷ್ಟು ರುಚಿ ತಂದುಕೊಟ್ಟು, ತನ್ನ ಅಸ್ತಿತ್ವವನ್ನು ಗಟ್ಟಿಪಡಿಸಿಕೊಳ್ಳುವ ಗುರಿಯನ್ನು ಕಂಪನಿ ಹೊಂದಿದೆ.
ಕಳೆದ ಹಲವು ವರ್ಷಗಳಿಂದ ಸ್ಲೈಸ್ ನಿಮ್ಮ ಮಾವಿನ ಕಡು ಬಯಕೆಗಳನ್ನು ತಣಿಸಲು ಪರಿಪೂರ್ಣ ಮತ್ತು ರುಚಿಯನ್ನು ನೀಡುವ ನಿಟ್ಟಿನಲ್ಲಿ ದೇಶಾ ದ್ಯಂತ ಮನೆಗಳಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ. ಇನ್ನೊಂದೆಡೆ, ನಯನತಾರಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿರುವ ನಟಿಯಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಜನಪ್ರಿಯತೆಯಿಂದಾಗಿಯೇ ಇವರನ್ನು `ಲೇಡಿ ಸೂಪರ್ ಸ್ಟಾರ್’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಬೇಸಿಗೆಯ ಋತುವಿಗೆ ಹೆಚ್ಚು ಮೋಜು ಮತ್ತು ಉತ್ಸಾಹವನ್ನು ಸೇರಿಸುವ ಭರವಸೆಯೊಂದಿಗೆ ಸ್ಲೈಸ್ ಈ ಹೊಸ ಸಹಭಾಗಿತ್ವದೊಂದಿಗೆ ಮುಂಚೂಣಿಯಲ್ಲಿದೆ ಮತ್ತು ಈ ಬೇಸಿಗೆಯ ನಂತರ ಹೊಸ ಅಭಿಯಾನವನ್ನು ಅನಾವರಣಗೊಳಿಸಲು ಬ್ರ್ಯಾಂಡ್ ಸಜ್ಜಾಗಿದೆ.
ಸ್ಲೈಸ್ ಗೆ ನೂತನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿ ಮಾತನಾಡಿದ ನಟಿ ನಯನತಾರಾ ಅವರು, “ಸ್ಲೈಸ್ ಕುಟುಂಬದ ಭಾಗವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತಸ ಮತ್ತು ಹೆಮ್ಮೆ ಎನಿಸುತ್ತಿದೆ ಮತ್ತು ಈ ಐಕಾನಿಕ್ ಬ್ರ್ಯಾಂಡ್ ನ ಪರಂಪರೆಗೆ ಕೊಡುಗೆ ನೀಡಲು ನಾನು ಉತ್ಸುಕಳಾಗಿದ್ದೇನೆ. ತನ್ನ ಸ್ಮರಣೀಯ ಅಭಿಯಾನಗಳಿಗೆ ಹೆಸರಾಗಿರುವ ಸ್ಪೈಸ್ ನ ಮುಂಬರುವ ಪ್ರಾಜೆಕ್ಟ್ ಗಳ ಭಾಗವಾಗುವು ದನ್ನು ಕಾತುರದಿಂದ ಕಾಯುತ್ತಿದ್ದೇನೆ. ಈ ಹೊಸ ಅಭಿಯಾನವು ನನ್ನ ಅಭಿಮಾನಿಗಳನ್ನು ಸ್ಲೈಸ್ ನ ಸಂತೋಷಕರ ಜಗತ್ತಿನಲ್ಲಿ ಅನನ್ಯ ಮತ್ತು ಆಕರ್ಷಕ ರೀತಿಯಲ್ಲಿ ತೇಲುವಂತೆ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ’’ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪೆಪ್ಸಿಕೊ ಇಂಡಿಯಾದ ಸ್ಲೈಸ್ ಮತ್ತು ಟ್ರೋಪಿಕಾನದ ಸಹಾಯಕ ನಿರ್ದೇಶಕ ಅನುಜ್ ಗೋಯಲ್ ಅವರು, “ಸ್ಲೈಸ್ ಕುಟುಂಬಕ್ಕೆ ನಯನತಾರಾ ಅವರನ್ನು ಆಹ್ವಾನಿಸಲು ನಮಗೆ ಹೆಮ್ಮೆ ಎನಿಸುತ್ತಿದೆ. ನಮ್ಮ ಮುಂಚೂಣಿಯ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಬ್ರ್ಯಾಂಡ್ ಗಳನ್ನು ಸಿದ್ಧಪಡಿಸಲು ಈ ಸಹಭಾಗಿತ್ವ ಮತ್ತಷ್ಟು ಸಹಾಯ ಮಾಡುವಲ್ಲಿ ಯಶಸ್ವಿಯಾಗಲಿದೆ ಎಂಬ ಆತ್ಮವಿಶ್ವಾಸ ನಮ್ಮದಾಗಿದೆ. ಸ್ಲೈಸ್ ಮತ್ತು ನಯನತಾರಾ ಇಬ್ಬರೂ ಪ್ರೇಕ್ಷಕರನ್ನು ರಂಜಿಸಿದ್ದಾರೆ ಮತ್ತು ಜನರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮ್ಯಾಜಿಕ್ ಹೊಸ ಜಾಹೀರಾತಿನಲ್ಲೂ ಮುಂದುವರಿಯುತ್ತದೆ ಮತ್ತು ಇದು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಾವು ಭಾವಿಸುತ್ತೇವೆ’’ ಎಂದು ತಿಳಿಸಿದರು.
ಸ್ಲೈಸ್ ಗಾಗಿ ಮಾಡಿಕೊಳ್ಳಲಾಗಿರುವ ಈ ಸಹಭಾಗಿತ್ವವನ್ನು ಫ್ರೇಮ್ ವರ್ಕ್ಸ್ ಎಂಟರ್ ಟೇನ್ಮೆಂಟ್ ಸುಗಮಗೊಳಿಸಿದೆ.