ಚಿಕ್ಕಮಗಳೂರು: ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ್ದು ನನ್ನ ಬಗ್ಗೆ ಯೋಚನೆ ಮಾಡಬೇಕಾಗಿರುವುದು ಬಿಜೆಪಿ ಮಾತ್ರ ಎಂದು ಮಾಜಿ ಶಾಸಕ ಸಿಟಿ ರವಿ ಅವರು ಟಾಂಗ್ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಜೆಪಿಯ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಗ ಕಾಂತೇಶ್ ಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಅವರು ಇತ್ತೀಚಿಗೆ ಸಿಟಿ ರವಿ, ಪ್ರತಾಪ್ ಸಿಂಹ ಡಿವಿ ಸದಾನಂದ ಗೌಡ ಅವರಿಗೆ ಕೂಡ ಬಿಜೆಪಿಯಿಂದ ಅನ್ಯಾಯವಾಗಿದೆ ಎಂಬ ಹೇಳಿಕೆ ನೀಡಿದ್ದರು.
ಬಿಜೆಪಿಯಲ್ಲಿ ಸಿಟಿ ರವಿಗೂ ಮೋಸವಾಗಿದೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಮಾಜಿ ಶಾಸಕ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ಈಗ ಚರ್ಚಿಸುವ ಸಮಯವಲ್ಲ ನಾನಂತೂ ಪಕ್ಷದ ಕಟ್ಟಾ ಕಾರ್ಯಕರ್ತ ಎಂದು ತಿಳಿಸಿದರು.
1988 ರಿಂದಲೂ ನಾನು ಭಾರತೀಯ ಜನತಾ ಪಕ್ಷದಲ್ಲಿ ಇದ್ದೇನೆ. ಬಿಜೆಪಿ ಸೇರಿದಾಗ ಮನೆಯಲ್ಲೂ ಒಬ್ಬಂಟಿ ಊರಿನಲ್ಲೂ ಒಬ್ಬಂಟಿಯಾಗಿದ್ದೆ. ಒಂದೊಂದೇ ಮೆಟ್ಟಿಲು ಹತ್ತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ನನ್ನ ಬಗ್ಗೆ ಯೋಚನೆ ಮಾಡಬೇಕಾಗಿರುವುದು ಬಿಜೆಪಿ ಮಾತ್ರ. ಲೋಕಸಭಾ ಚುನಾವಣಾ ವಯಕ್ತಿಕ ಹಿತಾಸಕ್ತಿ ಮೀರಿದ ಚುನಾವಣೆಯಾಗಿದೆ. ನಮ್ಮದು ಒಂದೇ ಗುರಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.