Advertisements

ಪ್ರಮಾಣ ವಚನ ಬೋಧಿಸಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ

ಚೆನ್ನೈ: ಕೆ.ಪೊನ್ಮುಡಿ ಅವರನ್ನು ಮತ್ತೆ ಸಚಿವರಾಗಲು ಪ್ರಮಾಣ ವಚನ ಬೋಧಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾಡಿರುವ ಶಿಫರಸನ್ನು ತಮಿಳುನಾಡು ರಾಜ್ಯಪಾಲ ಆರ್. ಎನ್.ರವಿ ನಿರಾಕರಿಸಿದ್ದಾರೆ.

ಅನರ್ಹಗೊಂಡ ತಮಿಳುನಾಡು ಸಚಿವ ಮತ್ತು ಡಿಎಂಕೆ ಹಿರಿಯ ನಾಯಕ ಕೆ ಪೊನ್ಮುಡಿ ಅವರನ್ನು ಮಾರ್ಚ್ 13, 2024 ರಂದು ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರ ಅಪರಾಧ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡಿದ ಕೆಲವು ದಿನಗಳ ನಂತರ ಅವರನ್ನು ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯವು ಪೊನ್ಮುಡಿ ಮತ್ತು ಅವರ ಪತ್ನಿ ವಿಶಾಲಾಕ್ಷಿ ವಿರುದ್ಧ 2011 ರಲ್ಲಿ ಪ್ರಕರಣ ದಾಖಲಿಸಿತ್ತು. 2006 ರಿಂದ 2011 ರವರೆಗೆ ಡಿಎಂಕೆ ಆಡಳಿತದಲ್ಲಿ ಪೊನ್ಮುಡಿ ಉನ್ನತ ಶಿಕ್ಷಣ ಮತ್ತು ಗಣಿ ಸಚಿವರಾಗಿದ್ದರು.

ರಾಜ್ಯ ವಿಧಾನಸಭಾ ಸ್ಪೀಕರ್ ಎಂ.ಅಪ್ಪಾವು ಅವರು ಪೊನ್ಮುಡಿ ಅವರನ್ನು ಮರುಸೇರ್ಪಡೆಗೊಳಿಸಿದ್ದು, ಅವರು ವಿಧಾನಸಭೆಯ ಸದಸ್ಯರಾಗಿ ಮುಂದು ವರಿಯಲಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಪೊನ್ಮುಡಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ಹೇಳಿದ್ದರು.

ಇದೇ ವೇಳೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರಿಗೆ ಪತ್ರ ಬರೆದು ಡಿಎಂಕೆ ಹಿರಿಯ ನಾಯಕ ಪೊನ್ಮುಡಿ ಸಚಿವರಾಗಿ ಪ್ರಮಾಣ ವಚನ ಬೋಧಿಸುವಂತೆ ಕೋರಿದ್ದರು.
ಪೊನ್ಮುಡಿ ಅವರ ದೋಷಾರೋಪಣೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕದ ಕಾರಣ ಅವರಿಗೆ ಪ್ರಮಾಣ ವಚನ ಬೋಧಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲ ರಾಜ್ಯ ಸರ್ಕಾರಕ್ಕೆ ಪತ್ರ ಕಳುಹಿಸಿದ್ದಾರೆ.

Leave a Comment

Advertisements

Recent Post

Live Cricket Update