Advertisements

ಐಪಿಎಲ್ ಗೆ ನವಜೋತ್ ಸಿಂಗ್ ಸಿಧು ವೀಕ್ಷಕ ವಿವರಣೆಗಾರ

ವದೆಹಲಿ: ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿಧು ತಮ್ಮ ಹಿಂದಿನ ಕ್ರಿಕೆಟ್ ವೀಕ್ಷಕ ವಿವರಣೆಗೆ ಮರಳಿದ್ದಾರೆ.

ಮಾ.22 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಸಿಧು ವೀಕ್ಷಕ ವಿವರಣೆಗಾರರಾಗಲಿದ್ದಾರೆ. “ಕಾಮೆಂಟರಿ ಬಾಕ್ಸ್’ನ ಸರ್ದಾರ್ ಮರಳಿದ್ದಾರೆ” ಎಂದು ತಿಳಿಸಿದೆ.

ಕಾಂಗ್ರೆಸ್ ಹೈಕಮಾಂಡ್ ಇನ್ನೂ 13 ಸ್ಥಾನಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸದಿದ್ದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವು ದಿಲ್ಲ ಎಂದು ಪಂಜಾಬ್ ಕಾಂಗ್ರೆಸ್ಸಿನ ಮಾಜಿ ಮುಖ್ಯಸ್ಥ ಸಿಧು ಪದೇ ಪದೇ ಹೇಳಿದ್ದರು. ಪಂಜಾಬ್ ನಲ್ಲಿ ಜೂನ್ 1ರಂದು ಲೋಕಸಭಾ ಚುನಾವಣೆ ನಡೆಯಲಿದೆ.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರ್ಡಿಂಗ್ ಮತ್ತು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ನೇತೃತ್ವದ ಕಾರ್ಯ ಕ್ರಮಗಳಲ್ಲಿ ವೇದಿಕೆಯನ್ನು ಹಂಚಿಕೊಳ್ಳದ ಸಿಧು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರ ಗುಂಪು ಅವರಿಗೆ ನಿಷ್ಠೆ ತೋರಿಸುವ ಮೂಲಕ ರಾಜ್ಯದಲ್ಲಿ ಸಮಾನಾಂತರ ಶಕ್ತಿ ಪ್ರದರ್ಶನಗಳನ್ನು ನಡೆಸುವ ಮೂಲಕ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ.

ಪಂಜಾಬ್ ಕಾಂಗ್ರೆಸ್ಸಿನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅಮೃತಸರದಿಂದ ಮೂರು ಬಾರಿ ಲೋಕಸಭಾ ಸಂಸದ, ಒಂದು ಬಾರಿ ರಾಜ್ಯಸಭಾ ಸಂಸದ ಮತ್ತು ಅಮೃತಸರ ಪೂರ್ವದಿಂದ ಒಂದು ಬಾರಿ ಶಾಸಕರಾಗಿದ್ದಾರೆ

Leave a Comment

Advertisements

Recent Post

Live Cricket Update