Advertisements

ಮಾಸ್ಕೊದಲ್ಲಿ ಉಗ್ರರ ದಾಳಿ: ಮೃತರ ಸಂಖ್ಯೆ 143ಕ್ಕೆ ಏರಿಕೆ

ಮಾಸ್ಕೋ : ರಷ್ಯಾದ ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದ್ದು, ನಾಲ್ವರು ಬಂದೂಕುಧಾರಿ ಗಳು ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ರಷ್ಯಾ ಶನಿವಾರ ತಿಳಿಸಿದೆ.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ದಾಳಿಯ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಕಳೆದ 20 ವರ್ಷಗಳಲ್ಲಿ ರಷ್ಯಾದಲ್ಲಿ ನಡೆದ ಅತ್ಯಂತ ಭೀಕರ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ದಾಯೆಶ್ ಹೊತ್ತುಕೊಂಡಿದೆ.

ಉಕ್ರೇನ್ ಗಡಿಗೆ ಹೋಗುವಾಗ “ಎಲ್ಲಾ ನಾಲ್ವರು ಭಯೋತ್ಪಾದಕರನ್ನು” ಬಂಧಿಸಲಾಗಿದೆ ಮತ್ತು ಅವರು ಉಕ್ರೇನಿನಲ್ಲಿ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಎಫ್‌ಎಸ್ಬಿ ಭದ್ರತಾ ಸೇವೆ ತಿಳಿಸಿದೆ. ಪ್ರಮುಖ ಅಪರಾಧಗಳ ತನಿಖೆ ನಡೆಸುತ್ತಿರುವ ರಷ್ಯಾದ ತನಿಖಾ ಸಮಿತಿ, ರಕ್ಷಣಾ ಕಾರ್ಯಕರ್ತರು ಕಟ್ಟಡದಿಂದ ಶವಗಳನ್ನು ಹೊರತೆಗೆಯುತ್ತಿದ್ದಾರೆ ಎಂದು ಹೇಳಿದರು.

Leave a Comment

Advertisements

Recent Post

Live Cricket Update