Advertisements

ಕಲಬೆರಕೆ ಸಾರಾಯಿ ಕುಡಿದು 21 ಮಂದಿ ದಾರುಣ ಸಾವು

ಚಂಡೀಗಢ: ಪಂಜಾಬ್​ ಹಾಡಿ ಸಂಗ್ರೂರ್​​ನಲ್ಲಿ ನಡೆದಿದೆ. ಎಥೆನಾಲ್ ಇರುವ ಮದ್ಯ ಸೇವಿಸಿದ್ದರಿಂದ ಕಲಬೆರಕೆ ಸಾರಾಯಿ ಕುಡಿದು 21 ಮಂದಿ ದಾರುಣ ಸಾವು ಕಂಡಿದ್ದಾರೆ.

ಇನ್ನೂ 40 ಮಂದಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಘಟನೆಯ ತನಿಖೆಗಾಗಿ ಪಂಜಾಬ್ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ.

ಮಾ.20ರಂದು ಪಂಜಾಬ್‌ನ ಹಾಡಿ ಸಂಗ್ರೂರ್ ಜಿಲ್ಲೆಯ ಹಲವು ಗ್ರಾಮಗಳಿಗೆ ಸೇರಿದ ಜನರು ಮದ್ಯ ಸೇವಿಸಿದ್ದಾರೆ. ಪರಿಣಾಮ ಒಂದೇ ದಿನ ನಾಲ್ವರು ಸಾವನ್ನಪ್ಪಿದ್ದಾರೆ. ಪಟಿಯಾಲಾದ ರಾಜೀಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮರುದಿನ ಇನ್ನೂ ನಾಲ್ವರು ಮೃತಪಟ್ಟಿ ದ್ದಾರೆ.

ಶುಕ್ರವಾರ ಎಂಟು ಜನರು, ಶನಿವಾರ ಐವರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 21 ಕ್ಕೆ ತಲುಪಿದೆ. ಇದುವರೆಗೆ ಸುಮಾರು 40 ಮಂದಿ ತೀವ್ರ ಅಸ್ವಸ್ಥರಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಂತ್ರಸ್ತರೆಲ್ಲರೂ ದಿನಗೂಲಿ ಕಾರ್ಮಿಕರು. ಈ ಘಟನೆಗೆ ಮದ್ಯದಲ್ಲಿ ಮೆಥನಾಲ್ ಅಂಶ ಮಿಶ್ರಣವಾಗಿದ್ದರಿಂದ ಸಾವಿಗೆ ಕಾರಣವಾಯಿತು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಘಟನೆಯ ತನಿಖೆಗಾಗಿ ಪಂಜಾಬ್ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ.

Leave a Comment

Advertisements

Recent Post

Live Cricket Update