Advertisements

59ನೇ ವಸಂತಕ್ಕೆ ಕಾಲಿಟ್ಟ ನಟ ಪ್ರಕಾಶ್ ರಾಜ್

ಬೆಂಗಳೂರು: ನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹೆಸರು ಮಾಡಿರುವ ನಟ ಪ್ರಕಾಶ್ ರಾಜ್ ಮಂಗಳವಾರ 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1990ರಲ್ಲಿ ‘ಮಿಥಿಲೆಯ ಸೀತೆಯರು’ ಎಂಬ ಕನ್ನಡ ಚಿತ್ರದಲ್ಲಿ ವೈದ್ಯನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.

1990ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಮುತ್ತಿನ ಹಾರ’ ಚಿತ್ರದಲ್ಲಿ ತೆರೆ ಹಂಚಿಕೊಂಡರು. 1996ರಲ್ಲಿ ಕಲ್ಕಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟ ಪ್ರಕಾಶ್ ರೈ ಅವರ ಅದ್ಭುತ ಪಾತ್ರಕ್ಕೆ ತಮಿಳ್ ನಾಡು ಸ್ಟೇಟ್ ಫಿಲಂ ಅವಾರ್ಡ್ ಪ್ರಶಸ್ತಿ ದೊರಕಿತ್ತು.

ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಎಲ್ಲಾ ರೀತಿಯ ಪಾತ್ರಗಳಲ್ಲಿ ಅಭಿನಯಿಸಿರುವ ಇವರು ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ.

ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಭಾಷೆಯ ಹಿರಿಯ ಮತ್ತು ಯುವ ನಟ, ನಟಿಯರು ಪ್ರಕಾಶ್ ರಾಜ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.

Leave a Comment

Advertisements

Recent Post

Live Cricket Update