• ಬೆಂಗಳೂರಿನ ಪ್ರವಾಸ್ನ ೪ನೇ ಆವೃತ್ತಿ
• ಅಂತಾರಾಷ್ಟಿçÃಯ ಪ್ರದರ್ಶನ ಕೇಂದ್ರದಲ್ಲಿ ಪ್ರದರ್ಶನ
• ಆಗಸ್ಟ್ ೨೯ ರಿಂದ ೩೧ ರವರೆಗೆ ನಡೆಯಲಿರುವ ಪ್ರದರ್ಶನ
ಬೆಂಗಳೂರು: ಬಹುನಿರೀಕ್ಷಿತ ಭಾರತದ ಬಹುಮಾದರಿ ಸಾರಿಗೆ ಪ್ರದರ್ಶನವಾದ ಪ್ರವಾಸ್ ೪.೦ ದ ೪ ನೇ ಆವೃತ್ತಿಯನ್ನು ಬಸ್ ಅಂಡ್ ಕಾರ್ ಆಪರೇಟರ್ಸ್ ಕಾನ್ಫೆಡರೇಷನ್ ಆಫ್ ಇಂಡಿಯಾ (BOCI) ಘೋಷಣೆ ಮಾಡಿದ್ದು, ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (ಬಿಐಇಸಿ)ಯಲ್ಲಿ ಆಗಸ್ಟ್ ೨೯ ರಿಂದ ೩೧ ರವರೆಗೆ ಈ ಪ್ರದರ್ಶನ ನಡೆಯಲಿದೆ.
“ಸುರಕ್ಷತೆ, ಸ್ಮಾರ್ಟ್ ಮತ್ತು ಸುಸ್ಥಿರ ಪ್ರಯಾಣಿಕ ಸಾರಿಗೆ’’ (Safe, Smart, and Sustainable Passenger Mobility) ಎಂಬ ಪ್ರಮುಖ ವಿಷಯದೊಂದಿಗೆ ಈ “ಪ್ರವಾಸ್ ೪.೦’’ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಬಹುಮಾದರಿಯ ಸಾರಿಗೆ ಭಾಗಿದಾರರೆಲ್ಲರನ್ನೂ ಒಟ್ಟಿಗೆ ಸೇರಿಸಲು ಈ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ದೇಶದ ೩೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಸ್ ಮತ್ತು ಕಾರುಗಳ ಉತ್ಪಾದಕ ಸಂಸ್ಥೆಗಳು, ಸಾರಿಗೆ ಕ್ಷೇತ್ರದ ಮಾಲೀಕರಯ ಹಾಗೂ ಮೆಟ್ರೋ ಮತ್ತು ಎಲ್ಇವಿ ಸಂಸ್ಥೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿವೆ. ಗೌರವಾನ್ವಿತ ಪ್ರಧಾನಮಂತ್ರಿಯವರ “ವಿಕಸಿತ್ ಭಾರತ’’ದ ದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಕ್ಷ ಸಾರ್ವಜನಿಕ ಸಾರಿಗೆಯ ಪ್ರಮುಖ ಪಾತ್ರವನ್ನು ಈ ಪ್ರವಾಸ್ ೪.೦ ವಹಿಸುತ್ತಿದೆ. ಈ ಮೂಲಕ ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚು ಮಾಡುವುದನ್ನು ಪ್ರೋತ್ಸಾಹಿಸುತ್ತಿದೆ. ಇಂತಹ ಬದಲಾವಣೆಯು ರಸ್ತೆಯಲ್ಲಿನ ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸುವುದಲ್ಲದೇ ಸುಸ್ಥಿರತೆಯ ಉದ್ದೇಶಗಳನ್ನು ಹೊಂದಿದೆ.
ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇರ್ಸ್ ಅಸೋಸಿಯೇಷನ್, ಕರ್ನಾಟಕ ಟೂರಿಸ್ಟ್ ಮೋಟರ್ ಕ್ಯಾಬ್ ಮ್ಯಾಕ್ಸಿ ಓರ್ಸ್ ವೆಲ್ಫೇರ್ ಅಸೋಸಿಯೇಷನ್, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಓರ್ಸ್ ಅಸೋಸಿಯೇಷನ್ ಸಂಸ್ಥೆಗಳು ಈ ಪ್ರವಾಸ್ ೪.೦ ನ ಆತಿಥ್ಯ ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಇಂದಿನ ಕರ್ಟೇನ್ರೈಸರ್ ಕಾರ್ಯಕ್ರಮವು ಪ್ರವಾಸ್ ೪.೦ ಚಟುವಟಿಕೆಗಳ ಪ್ರತಿಬಿಂಬವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಒಸಿಐ ಅಧ್ಯಕ್ಷ ಜಗದೇವ್ ಸಿಂಗ್ ಖಲ್ಸಾ, ಬಿಒಸಿಐ ಅಧ್ಯಕ್ಷ ಪ್ರಸನ್ನ ಪಟವರ್ಧನ್, ಬಿಒಸಿಐ ಪ್ರಧಾನ ಕಾರ್ಯದರ್ಶಿ ಅಲ್ಹಾ ಬಕ್ಸ್ ಆಫ್ಜಲ್, ಬಿಒಸಿಐ ಖಜಾಂಚಿ ಹರ್ಷ ಕೊಟಕ್, ಎಂಎA ಆ್ಯಕ್ಟೀವ್ ಕಾರ್ಯಕಾರಿ ಅಧ್ಯಕ್ಷ ಜಗದೀಶ್ ಪಟಾನ್ಕರ್ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.
ಪ್ರವಾಸ್ ೪.೦ ಬಹು-ಮಾದರಿ ಸಾರಿಗೆಯ ಕಡೆಗೆ ಒಂದು ಗ್ರೌಂಡ್ ಬ್ರೇಕಿಂಗ್ ಅನ್ವೇಷಣೆಯಾಗಿದೆ. ಇದು ಭವಿಷ್ಯದ ಸಾರಿಗೆ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಮ್ಮೇಳನವು ಒಳನೋಟವುಳ್ಳ ಸಂವಾದಗಳನ್ನು ಆಯೋಜಿಸುತ್ತದೆ. ಪ್ರದರ್ಶನವು ಉದ್ಯಮ-ಚಾಲಿತ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನದೊಂದಿಗೆ ಅತ್ಯಾಧುನಿಕ ಪ್ರವೃತ್ತಿಯನ್ನು ಗುರುತಿಸುತ್ತದೆ. ಅಲ್ಲದೇ, ಹಲವಾರು ವಿಭಾಗಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭವು ಉದ್ಯಮದಲ್ಲಿನ ಅಸಾಧಾರಣ ಕೊಡುಗೆಗಳು
ಮತ್ತು ಪ್ರತಿಭೆಗಳನ್ನು ಗುರುತಿಸುತ್ತದೆ. ಒಟ್ಟಿನಲ್ಲಿ, ಈ ಘಟಕಗಳು ಸಾರಿಗೆ ಶ್ರೇಷ್ಠತೆಗೆ ಮಾರ್ಗಸೂಚಿಯನ್ನು ಅನಾವರಣಗೊಳಿಸುವ ಸಮಗ್ರ ವೇದಿಕೆಯನ್ನು ರೂಪಿಸುತ್ತವೆ.
ಪ್ರವಾಸ್ನ ಈ ಆವೃತ್ತಿಯಲ್ಲಿ ಶಾಲಾ ಬಸ್ ವಿಭಾಗ, ಪ್ರವಾಸೋದ್ಯಮ, ಎಲೆಕ್ಟಿçಕ್ ವಾಹನಗಳು ಮತ್ತು ಮೆಟ್ರೋ ವ್ಯವಸ್ಥೆಗಳಿಗೆ ಗಮನಾರ್ಹ ಒತ್ತು ನೀಡಲಾಗುತ್ತದೆ. ನಾವು ಸಾರಿಗೆ ವ್ಯವಸ್ಥೆಯ ಭವಿಷ್ಯವನ್ನು ಅನ್ವೇಷಣೆ ಮಾಡುವಾಗ ಪ್ರವಾಸ್ ಒಂದು ದಾರಿದೀಪವಾಗಿ ನಿಲ್ಲಲಿದೆ. ಸುಸ್ಥಿರ, ಪರಿಣಾಮಕಾರಿ ಮತ್ತು ಅಂತರ್ಗತ ಸಾರಿಗೆ ಪರಿಹಾರಗಳ ಕಡೆಗೆ ಮುನ್ನಡೆಯುವ ಮಾರ್ಗದ ಬಗ್ಗೆ ಮಾರ್ಗದರ್ಶನ ನೀಡಲಿದೆ.
ಟಾಟಾ ಮೋಟರ್ಸ್, ರೆಡ್ಬಸ್, ಎಬರ್ಸ್ಪೇಸರ್ ಸ್ಯೂಟ್ರಾಕ್, ಅಭಿಬಸ್, ವಿಇಸಿವಿ, ಅಶೋಕ್ ಲೇಲ್ಯಾಂಡ್, ಜೆಬಿಎಂ, ರೆಪೋಸ್, ಬಿಟ್ಲಾ, ಮಹೀಂದ್ರಾ ಸ್ಕೂಲ್ ಬಸ್ ವಿಭಾಗ, ಊರ್ಜಾ ಬಸ್, ಎಂಜಿ ಮೋಟರ್, ವಾಲೆ, ಟ್ರಾನ್ಸ್ ಎಸಿಎನ್ಆರ್, ವಾಲೆ ಮದರ್ಸನ್ ಮತ್ತು ಇನ್ನಿತರ ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರವಾಸ್ ೪.೦ ಒಂದು ಅತ್ಯದ್ಭುತ ವೇದಿಕೆಯಾಗಿದ್ದು, ಇದರಲ್ಲಿ ೧೦೦+ ಪರಿಣತ ಭಾಷಣಕಾರರು, ೨೦೦+ ಪ್ರಮುಖ ಪ್ರದರ್ಶಕರು, ೧೫೦೦+ ಉದ್ಯಮ ಪ್ರತಿನಿಧಿಗಳು ಮತ್ತು ೬೦೦೦+ ಬಸ್ ಮತ್ತು ಕಾರು ಮಾಲೀಕರು, ೧೦,೦೦೦ ವ್ಯಾಪಾರ ಸಂದರ್ಶಕರ ನಿರೀಕ್ಷಿತ ಉಪಸ್ಥಿತರಿರಲಿದ್ದಾರೆ. ಪ್ರಯಾಣಿಕರ ಸಾರಿಗೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು, ನೆಟ್ವರ್ಕ್ ಸದೃಢಗೊಳಿಸಿಕೊಳ್ಳಲು ಮತ್ತು ಹೊಸತನದ ಚಾಲನೆ ಮಾಡಲು ಇದು ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ.