ಎನ್ಎಸ್ಇ ಮತ್ತು ಬಿಎಸ್ಇಯ ಸೋಶಿಯಲ್ ಸ್ಟಾಕ್ ಎಕ್ಚೇಂಜ್ನ್ಲಿ ಪಟ್ಟಿ ಮಾಡಲಾದ ಭಾರತದ ಮೊದಲ ಎನ್ಜಿಒ ಉನ್ನತಿ, 2030 ರ ವೇಳೆಗೆ 10 ಲಕ್ಷ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.
ಬೆಂಗಳೂರು: ಬೆಂಗಳೂರು ಮೂಲದ ಎಸ್ಜಿಬಿಎಸ್ ಉನ್ನತಿ ಫೌಂಡೇಶನ್ (ಎಸ್ಯುಎಫ್) 2023-24ರ ಆರ್ಥಿಕ ವರ್ಷದಲ್ಲಿ 12 ರಾಜ್ಯಗಳಲ್ಲಿ ಒಂದು ಲಕ್ಷ ಯುವಕರಿಗೆ ಯಶಸ್ವಿಯಾಗಿ ವೃತ್ತಿಪರ ಮತ್ತು ಸಾಮಾಜಿಕ ಪರಿವರ್ತನೆ ತರಬೇತಿ ನೀಡಿದ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಫೌಂಡೇಷನ್ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಶಕ್ತ ಕುಟುಂಬದ ಹಿನ್ನೆಲೆಯಿಂದ ಬಂದಿ ರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕೆ ಬದ್ಧವಾಗಿರುವ ಲಾಭೇತರ ಸಂಸ್ಥೆಯಾಗಿದೆ. (NGO)
ಉನ್ನತಿಯ ತರಬೇತಿ ಕಾರ್ಯಕ್ರಮವು ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳ ಸಮುದಾಯಗಳ ಮೇಲೆ ಕೇಂದ್ರೀಕರಿಸಿದೆ. ತನ್ನ ಯೋಜನೆಯಲ್ಲಿ 50% ಕ್ಕಿಂತ ಹೆಚ್ಚು ಮಹಿಳೆಯರನ್ನೇ ಆಯ್ಕೆ ಮಾಡುತ್ತಿದೆ. ತರಬೇತಿ ಪಡೆದ ಹೆಚ್ಚಿನ ಯುವಕರು ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು. ಕರ್ನಾಟಕ, ಆಂಧ್ರಪ್ರದೇಶ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಕೇರಳ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳೊಂದಿಗೆ ಒಡಂಬಡಿಕೆಗಳನ್ನು ಮಾಡುವ ಮೂಲಕ ಈ ಕಾರ್ಯಕ್ರಮವನ್ನು ಪ್ರಸ್ತುತ ಕಾರ್ಯಗತಗೊಳಿಸಲಾಗುತ್ತಿದೆ.
ಈ ಅಪೂರ್ವ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್ಜಿಬಿಎಸ್ ಉನ್ನತಿ ಫೌಂಡೇಶನ್ನ ನಿರ್ದೇಶಕ ರಮೇಶ್ ಸ್ವಾಮಿ, “ಉನ್ನತಿಗೆ ಈ ವರ್ಷ ಬಹಳ ವಿಶೇಷವಾಗಿದೆ, ಏಕೆಂದರೆ ನಾವು ಸೋಶಿಯಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆದ ಮೊದಲ ಎನ್ಜಿಒ ಎಂಬ ಸಾಧನೆ ಮಾಡಿದ್ದೇವೆ. ಹಾಲಿ ಹಣಕಾಸು ವರ್ಷವೊಂದರಲ್ಲೇ ನಾವು 1,00,000 ಯುವಕರಿಗೆ ತರಬೇತಿ ನೀಡಿರುವ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಈ 1 ಲಕ್ಷದ ವಿಶೇಷವೆಂದರೆ ತರಗತಿಯ ಮಾದರಿಯಾಗಿದ್ದು, ಅಲ್ಲಿ ಚೇಂಜ್ ಮೇಕರ್ಸ್ (ತರಬೇತುದಾರರು) ಈ ಯುವಕರ ಜೀವನದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಈ ಹೆಗ್ಗಳಿಕೆಯು ಸಮಾಜದ ಅಂಚಿ ನಲ್ಲಿರುವ ಸಮುದಾಯಗಳ ಜನರನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ, ಲಾಭದಾಯಕ ಉದ್ಯೋಗವನ್ನು ಪಡೆಯಲು ಮತ್ತು ಸಮಾಜದಲ್ಲಿ ಎತ್ತರಕ್ಕೆ ಏರಲು ಅಗತ್ಯವಾದ ಕೌಶಲ ಮತ್ತು ವಿಶ್ವಾಸವನ್ನು ಒದಗಿಸುತ್ತದೆ ಎಂದು ಹೇಳಿದರು.
ಎಸ್ಜಿಬಿಎಸ್ ಉನ್ನತಿ ಫೌಂಡೇಶನ್ನ ಸಿಎಫ್ಒ ರಮಣಿ ಎಂ.ಆರ್ ಮಾತನಾಡಿ, “1 ಲಕ್ಷ ಯುವಕರಿಗೆ ತರಬೇತಿ ನೀಡುವ ಈ ಮೈಲಿಗಲ್ಲನ್ನು ಸಾಧಿಸಲು ನಮಗೆ ಬೆಂಬಲ ನೀಡಿದ ನಮ್ಮ ಸಿಎಸ್ಆರ್ ಪಾಲುದಾರರಿಗೆ ನಾವು ಧನ್ಯವಾದಗಳನ್ನು ಅರ್ಪಿಸು ತ್ತೇವೆ. ಅವರ ನಿರಂತರ ಬೆಂಬಲ ಮತ್ತು ಇತರ ಅನೇಕ ಪಾಲುದಾರರ ಬೆಂಬಲದೊಂದಿಗೆ, ದೇಶಾದ್ಯಂತ 10 ಲಕ್ಷ ಯುವಕರ ಜೀವನದಲ್ಲಿ ಬದಲಾವಣೆ ತರುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಸಾಧನೆಯನ್ನು ನನಸಾಗಿಸಲು ಪ್ರಮುಖ ಪಾತ್ರ ವಹಿಸಿರುವ ಪ್ರತಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಮುಂದಿನ ಕೆಲವು ವರ್ಷಗಳಲ್ಲಿ ಇನ್ನೂ ಹೆಚ್ಚಿನದನ್ನು ಮಾಡಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.
‘ಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್ 2024’ ಪ್ರಕಾರ, ನಿರುದ್ಯೋಗಿಗಳಲ್ಲಿ ಸುಮಾರು 83%ರಷ್ಟು ಯುವ ಸಮುದಾಯ ದವರು. ಇದಲ್ಲದೆ, ಮಾಧ್ಯಮಿಕ ಶಿಕ್ಷಣ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಹೊಂದಿರುವ ನಿರುದ್ಯೋಗಿ ಯುವಕರ ಶೇಕಡಾ ವಾರು ಪ್ರಮಾಣ 2000ರಲ್ಲಿ 35.2% ರಷ್ಟಿತ್ತು. ಅದು 2022 ರಲ್ಲಿ 65.7% ಕ್ಕೆ ಏರಿದೆ. ಭಾರತದಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಹೆಚ್ಚುತ್ತಿದ್ದರೂ, ಶಿಕ್ಷಣದ ಗುಣಮಟ್ಟವು ಕಳವಳಕಾರಿಯಾಗಿ ಮುಂದುವರಿದಿದೆ ಎಂದು ವರದಿಯು ಎತ್ತಿ ತೋರಿಸುತ್ತದೆ. ಶಾಲಾ ಮಟ್ಟದಲ್ಲಿ ಗಮನಾರ್ಹ ಕಲಿಕೆಯ ಕೊರತೆಯಿದೆ ಮತ್ತು ಕಲಿಕಾ ಸಂಸ್ಥೆಗಳು ಒದಗಿಸುವ ಶಿಕ್ಷಣದ ಗುಣಮಟ್ಟವು ಅಸಮರ್ಪಕ ವಾಗಿದೆ. ಈ ಅಂತರವನ್ನು ಕಡಿಮೆ ಮಾಡಲು ಮತ್ತು ಯುವಕರನ್ನು ಉದ್ಯೋಗಕ್ಕೆ ಸಜ್ಜುಗೊಳಿಸಲು ಅಥವಾ ಉನ್ನತ ಶಿಕ್ಷಣ ಮುಂದುವರಿಸಲು ಉನ್ನತಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
ಉನ್ನತಿಯ UNXT ಕಾರ್ಯಕ್ರಮವು ಕೌಶಲಾಭಿವೃದ್ಧಿಯ ಮೂಲಕ ಯುವಸಬಲೀಕರಣದ ಸಮಗ್ರ ಯೋಜನೆಯಾಗಿದೆ . ಈ ಕಾರ್ಯಕ್ರಮವು 165 ಗಂಟೆಗಳ ತರಗತಿ ತರಬೇತಿಯನ್ನು ಒಳಗೊಂಡಿದ್ದು, 90 ಗಂಟೆಗಳನ್ನು ತರಗತಿಯ ಕಲಿಕೆಗೆ ಮೀಸಲಿಡ ಲಾಗಿದೆ, ಮೌಲ್ಯಗಳು, ಇಂಗ್ಲಿಷ್ ಸಂವಹನ ಮತ್ತು ಜೀವನ ಕೌಶಲ್ಯಗಳಂತಹ ಅಗತ್ಯ ವಿಷಯಗಳನ್ನು ಕಲಿಸಲಾಗುತ್ತದೆ. ಹೆಚ್ಚುವರಿಯಾಗಿ, ಮೊಬೈಲ್ ಅಪ್ಲಿಕೇಶನ್ ಮೂಲಕ 75 ಗಂಟೆಗಳ ಸ್ವಯಂ ನಿರ್ದೇಶಿತ ಕಲಿಕೆಯಲ್ಲಿ ತರಬೇತಿ ಪಡೆಯುವವರು ನಿರತರಾಗುತ್ತಾರೆ, ಇದು ಜೀವನಪರ್ಯಂತ ಕಲಿಕೆಯ ಅಭ್ಯಾಸವನ್ನು ಉತ್ತೇಜಿಸುತ್ತದೆ. 35-40 ವಿದ್ಯಾರ್ಥಿಗಳ ಸಣ್ಣ ಬ್ಯಾಚ್ಗಳಲ್ಲಿ ನಡೆಸಲಾಗುವ ಪ್ರತಿ ಸೆಷನ್ ಮೂರು ಗಂಟೆಗಳ ಕಾಲ ನಡೆಯುತ್ತದೆ. ವರ್ಷದುದ್ದಕ್ಕೂ ನಿಗದಿತ ಕಾಲೇಜು ಸಮಯದ ಬಳಿಕ, ಸರ್ಕಾರಿ ಕಾಲೇಜು ಆವರಣದಲ್ಲಿ ನಡೆಯುತ್ತದೆ. ಇದನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
ಉನ್ನತಿ ಫೌಂಡೇಶನ್ ಬಗ್ಗೆ
ಸಮಾಜದ ವಿವಿಧ ವರ್ಗಗಳಿಗೆ ಸೇವೆ ಸಲ್ಲಿಸುವ ಮತ್ತು ಕೇಂದ್ರೀಕೃತ ಕಾರ್ಯಕ್ರಮಗಳ ಮೂಲಕ ಸಾಮರಸ್ಯ ಮೂಡಿಸುವ ಧ್ಯೇಯದೊಂದಿಗೆ, ಉನ್ನತಿ ಫೌಂಡೇಶನ್ 18-25 ವರ್ಷದೊಳಗಿನ ಯುವಕರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಸಂಸ್ಥೆಯು ಇಎಸ್ಐ, ಪಿಎಫ್ ಮತ್ತು ಗ್ರಾಚ್ಯುಟಿಯಂತಹ ಸಾಮಾಜಿಕ ಭದ್ರತೆಯೊಂದಿಗೆ ಉದ್ಯೋಗ ಸೇರ್ಪಡೆಯ ಖಾತರಿ ನೀಡುತ್ತದೆ. ಉನ್ನತಿಯನ್ನು 3 ಮೂಲಭೂತ ತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಂಡು ರಚಿಸಲಾಗಿದೆ. ಅವುಗಳೆಂದರೆ, ತರಬೇತಿ ಯು ಉದ್ಯೋಗಕ್ಕೆ ಕಾರಣವಾಗುತ್ತದೆ ಇದರಿಂದ ವ್ಯಕ್ತಿಯು ಅಂತರ್ಗತ ಸಮಾಜದ ಭಾಗವಾಗುತ್ತಾನೆ ಮತ್ತು ಅವನು / ಅವಳು ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುತ್ತಾರೆ
ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಉನ್ನತಿ (ವಿಟಿಪಿ). 18 ರಿಂದ 25 ವರ್ಷ ವಯಸ್ಸಿನ ಅಶಕ್ತ ಯುವಕರಿಗೆ 35 ದಿನಗಳ ವೃತ್ತಿಪರ ತರಬೇತಿ ಮತ್ತು ಸಾಮಾಜಿಕ ಪರಿವರ್ತನೆ ಕಾರ್ಯಕ್ರಮವಾಗಿದೆ. ಇದು 300 ಗಂಟೆಗಳ ತರಬೇತಿ ನೀಡುತ್ತದೆ ಜತೆಗೆ ಸ್ಪೋಕನ್ ಇಂಗ್ಲಿಷ್, ಜೀವನ ಕೌಶಲ ಗಳು, ಮೌಲ್ಯಗಳು, ಬೇಸಿಕ್ ಕಂಪ್ಯೂಟರ್ ಕೌಶಲಗಳು ಮತ್ತು ಅವರವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ವೃತ್ತಿಪರ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿದೆ. ತರಬೇತಿಯ ಕೊನೆಯಲ್ಲಿ ನಿಗದಿಪಡಿಸಿ ಉದ್ಯೋಗಗಳನ್ನು ಒದಗಿಸುತ್ತದೆ.
ಮೊದಲ ಬ್ಯಾಚ್ ಅನ್ನು ಎರಡು ವೃತ್ತಿಗಳೊಂದಿಗೆ ಸಣ್ಣ ಬಾಡಿಗೆ ಆವರಣದಲ್ಲಿ ಪ್ರಾರಂಭಿಸಲಾಗಿತ್ತು. 1 ವರ್ಷದ ಅವಧಿಯಲ್ಲಿ 70 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. “ಪ್ರಾರಂಭದಿಂದಲೂ, ನಾವು 80,000 ಯುವಕರಿಗೆ ಯಶಸ್ವಿಯಾಗಿ ತರಬೇತಿ ನೀಡಿದ್ದೇವೆ ಮತ್ತು 2022-23 ರಲ್ಲಿ 25,000 ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಸಾಧಿಸಿದ್ದೇವೆ” ಎಂದು ಎಸ್ಜಿಬಿಎಸ್ ಉನ್ನತಿ ಫೌಂಡೇಶನ್ ನಿರ್ದೇಶಕ ನಾರಾಯಣನ್ ಎಎಸ್ ಹೇಳುತ್ತಾರೆ. ಪ್ರಸ್ತುತ, ಎಸ್ ಯುಎಫ್ ದೇಶಾದ್ಯಂತ ಒಟ್ಟು 37ಕ್ಕೂ ಅಧಿಕ ಕೇಂದ್ರಗಳನ್ನು ಹೊಂದಿದೆ.