ಕಾರು ಹಂಚಿಕೆ ಮಾರ್ಕೆಟ್ಪ್ಲೇಸ್ ಪ್ಲಾಟ್ಫಾರಂನಲ್ಲಿ ಕಾರುಗಳ ಸಂಖ್ಯೆ ಹೆಚ್ಚಿಸಲು ಸ್ಥಳೀಯ ಹೋಸ್ಟ್ಗಳಿಗೆ ಬೆಂಬಲ
ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಹಣಕಾಸು ಆಯ್ಕೆಗಳನ್ನು ಒದಗಿಸುವ ಮೂಲಕ ಹೆಚ್ಚುವರಿ ವಾಹನಗಳನ್ನು ಖರೀದಿಸಲು ಸ್ಥಳೀಯ ಝೂಮ್ಕಾರ್ ಹೋಸ್ಟ್ಗಳಿಗೆ ಅನುಕೂಲ ಒದಗಿಸಲು ಮಹತ್ವದ ಪಾಲುದಾರಿಕೆ
ಬೆಂಗಳೂರು: ಸೆಲ್ಫ್ ಡ್ರೈವ್ ಕಾರು ಹಂಚಿಕೆ ಮಾಡುವ, ನಾಸ್ಡಾಕ್ನಲ್ಲಿ ಲಿಸ್ಟ್ ಆಗಿರುವ ಪ್ರಮುಖ ಮಾರ್ಕೆಟ್ಪ್ಲೇಸ್ ಝೂಮ್ ಕಾರ್ ಹೋಲ್ಡಿಂಗ್ಸ್ ಇಂಕ್ (ಝೂಮ್ಕಾರ್ ಅಥವಾ ಕಂಪನಿ) (ನಾಸ್ಡಾಕ್: ZCAR) ಈಗ ಕಾರು ಖರೀದಿ ವೇದಿಕೆ ACKO ಸಂಸ್ಥೆಯ ACKO ಡ್ರೈವ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ತಮ್ಮ ಕಾರುಗಳ ಸಂಖ್ಯೆಯನ್ನು ವಿಸ್ತರಿಸಲು ಸ್ಥಳೀಯ ಝೂಮ್ಕಾರ್ ಹೋಸ್ಟ್ಗಳನ್ನು ಸಬಲೀಕರಿಸಲು ಇದು ನೆರವಾಗಲಿದೆ.
ಈ ಪಾಲುದಾರಿಕೆಯ ಮೂಲಕ, ಝೂಮ್ಕಾರ್ ಹೋಸ್ಟ್ಗಳು ಹೊಸ ಕಾರು ಖರೀದಿ ಮಾಡಿದಾಗ 85 ಸಾವಿರ ರೂ.ವರೆಗೆ ಆಕರ್ಷಕ ಕಾರು ಹಣಕಾಸು ಸೌಲಭ್ಯದಲ್ಲಿ ಉಳಿತಾಯ, ತಕ್ಷಣ ಸಾಲ ಅನುಮೋದನೆ, ಎಕ್ಸ್ಪ್ರೆಸ್ ಕಾರು ಡೆಲಿವರಿ ಹಾಗೂ ಇತರ ಸೌಲಭ್ಯವನ್ನು ACKO ಡ್ರೈವ್ ಒದಗಿಸಲಿದೆ. ಈ ಪಾಲುದಾರಿಕೆಯಿಂದ ಹೋಸ್ಟ್ಗಳು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಅನುಕೂಲವಾಗಲಿದೆ.
ಭಾರತೀಯ ಪ್ರವಾಸೋದ್ಯಮದಲ್ಲಿ ಕಾರು ಶೇರಿಂಗ್ ಬೇಡಿಕೆ ಅಪಾರವಾಗಿ ಹೆಚ್ಚುತ್ತಿದೆ. ಅಪರೂಪದ ಹಾಗೂ ವಿಮಾನ, ಬಸ್ಗಳು ಮತ್ತು ರೈಲುಗಳಿಂದ ತಲುಪಲು ಸಾಧ್ಯವಾಗದ ಸ್ಥಳಗಳಿಗೆ ತೆರಳುವುದಕ್ಕೆ ಅನುಕೂಲ ಮತ್ತು ಸ್ವಾತಂತ್ರ್ಯವನ್ನೂ ಅವರು ಬಯಸುತ್ತಿದ್ದಾರೆ. ಇದರಿಂದಾಗಿ ಸೆಲ್ಫ್ ಡ್ರೈವ್ ಕಾರುಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಝೂಮ್ಕಾರ್ ನಂತಹ ಉದ್ಯಮದ ಪ್ರಮುಖ ಸಂಸ್ಥೆಗಳತ್ತ ಜನರು ಮುಖಮಾಡುತ್ತಿದ್ದಾರೆ.
ಝೂಮ್ಕಾರ್ 2023 ರ 3ನೇ ತ್ರೈಮಾಸಿಕದ ಫಲಿತಾಂಶಗಳ ಪ್ರಕಾರ, ಝೂಮ್ಕಾರ್ ಹೋಸ್ಟ್ಗಳು ಅಂದಾಜು 4 ಮಿಲಿಯನ್ ಡಾಲರ್ ಗಳಿಸಿದ್ದಾರೆ ಮತ್ತು ಕಾರು ರೆಂಟಿಂಗ್ನಷ್ಟೇ ಕಾರು ಹೋಸ್ಟಿಂಗ್ ಅನ್ನೂ ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸುತ್ತಿದೆ. ಸಣ್ಣ ಉದ್ಯಮಶೀಲತೆ ಅವಕಾಶವನ್ನಾಗಿ ಪ್ಲಾಟ್ಫಾರಂ ಅನ್ನು ಬಳಸಿಕೊಳ್ಳುವ ವೃತ್ತಿಪರ ಹೋಸ್ಟ್ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಪನಿ ಗಮನಿಸುತ್ತಿದೆ. ಆನ್ಲೈನ್ ಕಾರು ಖರೀದಿಯನ್ನು ACKO ಡ್ರೈವ್ ಪ್ರೋತ್ಸಾಹಿಸುತ್ತಿದ್ದು, ಮಾಡೆಲ್ಗಳನ್ನು ಹೋಲಿಸುವುದು, ಹಣಕಾಸು ಆಯ್ಕೆಗಳನ್ನು ಆರಿಸಿಕೊಳ್ಳುವುದು, ವಿಮೆ ಖರೀದಿ ಮತ್ತು ಸೇಲ್ಸ್ ನಂತರದ ಸರ್ವೀಸ್ಗಳು ಇತ್ಯಾದಿ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ತರಲು ACKO ಡ್ರೈವ್ ಪ್ರಯತ್ನಿಸುತ್ತಿದೆ.
ಈ ಸಹಭಾಗಿತ್ವದ ಮೂಲಕ, ಝೂಮ್ಕಾರ್ ಹೋಸ್ಟ್ಗಳಿಗೆ ತಮ್ಮ ಎಕ್ಸ್ಕ್ಲೂಸಿವ್ ಕೊಡುಗೆಗಳನ್ನು ACKO ಡ್ರೈವ್ ಒದಗಿಸಲಿದೆ. ಈ ಮೂಲಕ ಕಾರು ಶೇರಿಂಗ್ನಿಂದ ಹೆಚ್ಚು ಗಳಿಕೆ ಮಾಡಲು ಅವರಿಗೆ ಅನುಕೂಲ ಮಾಡಿಕೊಡಲಿದೆ. ಹೊಸ ಮತ್ತು ಈಗಾಗಲೇ ಇರುವ ಝೂಮ್ಕಾರ್ ಹೋಸ್ಟ್ಗಳಿಗೆ ಗಮನಾರ್ಹ ಅವಕಾಶವನ್ನು ಈ ಪಾಲುದಾರಿಕೆಯು ಒದಗಿಸಲಿದ್ದು, ತಮ್ಮ ಉದ್ಯಮ ಕಾರ್ಯಾಚರಣೆಗಳನ್ನು ಹೋಸ್ಟ್ಗಳು ಆರಂಭಿಸಬಹುದು ಮತ್ತು ವಿಸ್ತರಿಸಿಕೊಳ್ಳಬಹುದು. ಇದು ಹೊಸ ಕಾರು ಮಾಡೆಲ್ಗಳನ್ನು ಗ್ರಾಹಕರು ಬಳಸುವುದಕ್ಕೂ ಅನುಕೂಲ ಮಾಡಿಕೊಡಲಿದೆ.
ಈಗಾಗಲೇ ಇರುವ ಝೂಮ್ಕಾರ್ ಹೋಸ್ಟ್ಗಳು ತಮ್ಮ ಕಾರುಗಳನ್ನು ಅಪ್ಗ್ರೇಡ್ ಮಾಡಿಕೊಂಡು, ವಿವಿಧ ರೀತಿಯ ವಾಹನ ಗಳಿಗೆ ಇರುವ ಬೇಡಿಕೆಯನ್ನು ಪೂರೈಸಬಹುದು. ಇತ್ತೀಚಿನ ಆಡೆಲ್ಗಳನ್ನು ಖರೀದಿ ಮಾಡುವ ಮೂಲಕ ಹೋಸ್ಟ್ಗಳು ತಮ್ಮ ಸ್ಫರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಹೊಸ ಮತ್ತು ಹೆಚ್ಚು ಆಕರ್ಷಕ ವಾಹನಗಳನ್ನು ಬಳಸಿಕೊಂಡು ಗಳಿಕೆ ಸಾಧ್ಯತೆಯನ್ನೂ ಹೆಚ್ಚಿಸಿಕೊಳ್ಳಬಹುದು.
“ನಮ್ಮ ಅತಿಥಿಗಳಿಗೆ ಉನ್ನತ ಗುಣಮಟ್ಟದ ಅನುಭವವನ್ನು ಒದಗಿಸಲು ನಾವು ಹೆಚ್ಚು ಗಮನಹರಿಸಿದ್ದೇವೆ ಮತ್ತು ಹೊಸ ಮತ್ತು ವಿಭಿನ್ನ ಕಾರು ಆಯ್ಕೆಗಳನ್ನು ಒದಗಿಸುವ ಮೂಲಕ ಸೆಲ್ಪ್ ಡ್ರೈವ್ ಅನುಭವವನ್ನು ಅದ್ಭುತವಾಗಿಸಲು ನಾವು ಉದ್ದೇಶಿಸಿದ್ದೇವೆ” ಎಂದು ಝೂಮ್ ಕಾರ್ ಸಿಇಒ ಮತ್ತು ಸಹಸಂಸ್ಥಾಪಕ ಗ್ರೆಗ್ ಮೋರನ್ ಹೇಳಿದ್ದಾರೆ. “ಕಾರು ಹಂಚಿಕೆ ಮಾರ್ಕೆಟ್ಪ್ಲೇಸ್ ಅನ್ನು ಗಮನಾರ್ಹವಾಗಿ ಬೆಳೆಸಲು ಝೂಮ್ಕಾರ್ ಉದ್ದೇಶಿಸಿದೆ. ಹೆಚ್ಚು ಹೋಸ್ಟ್ಗಳು ಇದಕ್ಕೆ ಸೇರ್ಪಡೆಯಾಗಿ, ಪ್ಲಾಟ್ಫಾರಂ ಜೊತೆಗೆ ಬೆಳೆಯುವುದಕ್ಕೆ ಇದು ಪ್ರೋತ್ಸಾಹ ನೀಡುತ್ತಿದೆ.
ACKO ಡ್ರೈವ್ ಜೊತೆಗೆ ನಮ್ಮ ಪಾಲುದಾರಿಕೆಯು ಸುಧಾರಿತ ಕೈಗೆಟಕುವಿಕೆ ಮತ್ತು ಆಯ್ಕೆಯನ್ನು ಒದಗಿಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ” ಎಂದೂ ಅವರು ಹೇಳಿದ್ದಾರೆ. ACKO ಡ್ರೈವ್ ಜೊತೆಗೆ ಝೂಮ್ಕಾರ್ ಪಾಲುದಾರಿಕೆಯು ಗ್ರಾಹಕರ ಹೆಚ್ಚು ತ್ತಿರುವ ಬೇಡಿಕೆ ಯನ್ನು ಪೂರೈಸಲು ಮಹತ್ವದ್ದಾಗಿದೆ ಮತ್ತು ವೈವಿಧ್ಯಮಯ ಮತ್ತು ಹೊಸ ಕಾರು ಮಾಡೆಲ್ಗಳ ಮೂಲಕ ಸ್ಥಳೀಯ ಉದ್ಯಮಶೀಲರಿಗೆ ಬೆಂಬಲವನ್ನು ಇದು ನೀಡುತ್ತದೆ.
ಪಾಲುದಾರಿಕೆಯ ಬಗ್ಗೆ ಮಾತನಾಡಿದ ACKO ಡ್ರೈವ್ನ ಎಸ್ವಿಪಿ ನಿತಿನ್ ಛಡ್ಡಾ “ಭಾರತೀಯರು ವಿಭಿನ್ನ ಪ್ರಯಾಣ ಮತ್ತು ಅನುಭವವನ್ನು ಪಡೆಯುವುದಕ್ಕೆ ಬಯಸುತ್ತಿದ್ದಾರೆ. ಅಂಥವರಿಗೆ ಅತ್ಯಂತ ಸೂಕ್ತವಾದ ವೇದಿಕೆಯನ್ನು ಝೂಮ್ಕಾರ್ ಒದಗಿಸಿ ಕೊಡುತ್ತದೆ. ಆನ್ಲೈನ್ ಕಾರು ಖರೀದಿ ವಿಧಾನದಲ್ಲಿ ACKO ಡ್ರೈವ್ ಪರಿಣಿತಿ ಹೊಂದಿದೆ. ಈ ಎರಡೂ ಸಂಸ್ಥೆಗಳ ಪಾಲುದಾರಿ ಕೆಯ ಮೂಲಕ ಗ್ರಾಹಕರು ಈ ವೇದಿಕೆಯನ್ನು ಹೆಚ್ಚು ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಝೂಮ್ ಕಾರ್ಗೆ ವಿಶ್ವಾಸವಿದೆ. ಕಾರು ಉತ್ಸಾಹಿಗಳಿಗೆ ಒಂದು ಉತ್ತಮ ಬೆಂಬಲ ವನ್ನು ಒದಗಿಸುವ ಮೂಲಕ ಇನ್ನೊಂದು ಮಹತ್ವದ ಹೆಜ್ಜೆಯನ್ನು ಝೂಮ್ಕಾರ್ ಇಟ್ಟಿದೆ. ಇದರಲ್ಲಿ ACKO ಡ್ರೈವ್ ಸಮಗ್ರ ಹಣಕಾಸು ಸೌಲಭ್ಯವನ್ನು ಮತ್ತು ಸೂಕ್ತ ವಿಮೆ ಅನುಕೂಲವನ್ನು ಒದಗಿಸಿಕೊಡಲಿದೆ” ಎಂದಿದ್ದಾರೆ.
ದೇಶೀಯ ಪ್ರವಾಸೋದ್ಯಮದ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಿರುವ ಝೂಮ್ಕಾರ್ ಮತ್ತು ACKO ಡ್ರೈವ್, ಕಾರು ಖರೀದಿ ಮತ್ತು ಕಾರು ಶೇರಿಂಗ್ನಲ್ಲಿ ಗ್ರಾಹಕರಿಗೆ ಪ್ರಾಯೋಗಿಕ, ಕಡಿಮೆ ವೆಚ್ಚದ ಮತ್ತು ವಿಶ್ವಾಸಾರ್ಹ ಸೌಲಭ್ಯವನ್ನು ಒದಗಿಸುವುದರಲ್ಲಿ ಮುಂಚೂಣಿಯಲ್ಲಿದೆ.