ಚಾಮರಾಜನಗರ: ನಾಮಪತ್ರ ಸಲ್ಲಿಸುವ ದಿನವೇ ಕೈ ಅಭ್ಯರ್ಥಿಗೆ ಶಾಕ್ ಎದುರಾದ ಘಟನೆ ಚಾಮರಾಜನಗರ (Chamarajanagar) ಲೋಕ ಸಭಾ ಕ್ಷೇತ್ರದಲ್ಲಿ ಬುಧವಾರ ನಡೆದಿದೆ.
ಬೃಹತ್ ಮೆರವಣಿಗೆಯೊಂದಿಗೆ ಸಿಎಂ, ಡಿಸಿಎಂ ಮುಂತಾದ ಘಟಾನುಘಟಿಗಳ ಸಮ್ಮುಖದಲ್ಲಿ ಚಾಮರಾಜನಗರ ಕಾಂಗ್ರೆಸ್ (Congress) ಅಭ್ಯರ್ಥಿ ಸುನಿಲ್ ಬೋಸ್ ನಾಮಪತ್ರ ಸಲ್ಲಿಸಿದ ದಿನವೇ ಗೋ ಬ್ಯಾಕ್ ಸುನಿಲ್ ಬೋಸ್ ಎಂಬ ಪೋಸ್ಟರ್ ಗಳು ಬೀದಿಯಲ್ಲಿ ಪ್ರತ್ಯಕ್ಷವಾಗಿದೆ.
ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅಸಮಾಧಾನ ಹೊರಹಾಕಿದ ಅನಾಮಿಕ ಮತದಾರರು, ಚಾಮರಾಜನಗರ ಕೊಳ್ಳೆಗಾಲ ರಸ್ತೆಯಲ್ಲಿ ಗೋ ಬ್ಯಾಕ್ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಡೆಗಳ ಮೇಲೆ ಗೋ ಬ್ಯಾಕ್ ಸುನಿಲ್ ಬೋಸ್ ಎಂದು ಬರೆದಿ ರುವುದಷ್ಟೇ ಅಲ್ಲದೇ, ಮರಳು ಮಾಫಿಯಾ ದೊರೆಗೆ ಮರಳಾಗಬೇಡಿ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ.
ತಡ ರಾತ್ರಿ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.