ವಿಜಯಪುರ : ಸತತ 22ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸ್ವಾತ್ವಿಕ್ ರಕ್ಷಣೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ಸತತ 21 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದ್ದು, ಹೈದರಾಬಾದಿನ ಎಂದ ಎನ್ ಡಿ ಆರ್ ಎಫ್ ತಂಡ ಕಾರ್ಯಾಚರಣೆ ಬಳಿಕ ಮಗುವನ್ನು ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರ ತೆಗೆಯಲಾಗಿದೆ.
ಗ್ರಾಮದ ಶಂಕರಪ್ಪ ಮುಜಗೊಂಡ ಎನ್ನುವವರ ಜಮೀನಿನಲ್ಲಿ ಕೊಳವೆ ಬಾವಿಯಲ್ಲಿ ಎರಡು ವರ್ಷದ ಬಾಲಕ ಸಾತ್ವಿಕ್ ಸುಮಾರು 15ರಿಂದ 20 ಅಡಿ ಆಳದಲ್ಲಿ ಬಿದ್ದಿದ್ದ. ಬಳಿಕ ಕಾರ್ಯಾಪ್ರವೃತ್ತರಾ ಅಧಿಕಾರಿಗಳು ಎರಡು ಹಿಟಾಚಿ ಮೂರು ಜಿಸಿಬಿ ಗಳಿಂದ ಸಾತ್ವಿಕನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಲಾಗಿತ್ತು. ಅಲ್ಲದೆ ಎಸ್ ಡಿ ಆರ್ ಎಫ್ ತಂಡ ಕೂಡ ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಚರಣೆ ನಡೆಸಿದೆ. ಅಲ್ಲದೆ ಇಂಡಿ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ಸ್ಥಳದಲ್ಲಿ ಕಾರ್ಯಚರಣೆಯಲ್ಲಿ ನಿರತರಾಗಿದ್ದರು.
ಇನ್ನೂರಕ್ಷಣಾ ಕಾರ್ಯಚರಣೆ ವೇಳೆಯಲ್ಲಿ ಮಗುವಿನ ಶಬ್ದವನ್ನು ಕೇಳಿಸಿಕೊಂಡು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು, ಇದು ಮಗುವನ್ನು ಉಳಿಸುವುದಕ್ಕೆ ಎಲ್ಲರ ಮನಸ್ಸು ದಾಂಗುಡಿ ಇಡುತಿತ್ತು, ಇನ್ನೂ ಮಗುವನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎನ್ನಲಾಗಿದೆ. ಸದ್ಯ ಮಗುವಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗುವುದು ಅಂಥ ವೈದ್ಯರು ತಿಳಿಸಿದ್ದಾರೆ.
ಎರಡು ವರ್ಷದ ಬಾಲಕ ಜೀವಂತವಾಗಿ ಹೊರಬರಲೆಂದು ಲಕ್ಷಣ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮದ ಯುವಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ ಅಲ್ಲದೆ ಇಡೀ ಕರುನಾಡಿನ ಜನತೆಯ ಕೂಡ ಸಾತ್ವಿಕ್ ಸಾವನ್ನು ಗೆದ್ದು ಬರಲಿ ಎಂದು ಪ್ರಾರ್ಥಿಸು ತ್ತಿದ್ದರು.
ಜಿಲ್ಲೆಯಲ್ಲಿ ಇದು 3ನೇ ಪ್ರಕರಣ : ಇಂದಿನ ಪ್ರಕರಣಕ್ಕೂ ಮುಂಚೆ ಇಂತಹ ಎರಡು ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ನಡೆದಿದ್ದವು. 2008 ಮತ್ತು 2014ರಲ್ಲಿಕೊಳವೆ ಬಾವಿ ದುರಂತಗಳು ಸಂಭವಿಸಿದ್ದವು. 2008 ರಲ್ಲಿ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಕಾಂಚನಾ ಉರ್ಪ್ ಏಗವ್ವ ಎನ್ನುವ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸ ಲಾಗಿತ್ತು. ಆದ್ರೆ, ಮಗು ಮೃತಪಟ್ಟಿತ್ತು.
2014 ರಲ್ಲಿ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದಲ್ಲಿ ನಡೆದಿತ್ತು. ಆಟವಾಡುವ ವೇಳೆ 3 ವರ್ಷದ ಬಾಲಕಿ ಅಕ್ಷತಾ ಹನುಮಂತ ಪಾಟೀಲ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಅಕ್ಷತಾ ರಕ್ಷಣಾ ಕಾರಾಚರಣೆ ನಡೆದರೂ ಫಲ ಸಿಕ್ಕಿರಲಿಲ್ಲ. ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿದ್ದರೂ ಅಕ್ಷತಾ ಬದುಕಿ ಬರಲಿಲ್ಲ. ಇದು ಇದೀಗ ಜಿಲ್ಲೆಯಲ್ಲಿ ಮೂರನೇ ಪ್ರಕರಣವಾಗಿದೆ.