Advertisements

ಕೂಲಿ ಕೆಲಸ ಮಾಡಿ ವಿಚ್ಛೇದಿತ ಪತ್ನಿಗೆ 2,000 ರೂ. ಜೀವನಾಂಶ ನೀಡಿ: ಹೈಕೋರ್ಟ್‌ನ ಲಕ್ನೋ ಪೀಠ

ಕ್ನೋ: ಪತಿ ತನಗೆ ಆದಾಯ ಇಲ್ಲದೇ ಇದ್ದರೂ ಕೆಲಸ ಮಾಡಿ ವಿಚ್ಛೇದನ ನೀಡಿರುವ ಪತ್ನಿಗೆ ಮಾಸಿಕ 2,000 ರೂ. ಜೀವನಾಂಶ ನೀಡುವಂತೆ ಅಲಹಾ ಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಆದೇಶಿಸಿದೆ.

ಉನ್ನಾವೋ ವ್ಯಕ್ತಿಯೊಬ್ಬರು ತಮ್ಮ ವಿಚ್ಛೇದಿತ ಪತ್ನಿಗೆ ಮಾಸಿಕ 2,000 ರೂ. ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯದ ಪ್ರಧಾನ ನ್ಯಾಯಾ ಧೀಶರ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇಣು ಅಗರವಾಲ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ವ್ಯಕ್ತಿಯೊಬ್ಬ ಕೂಲಿ ಕೆಲಸ ಮಾಡಿ ದಿನಕ್ಕೆ 350- 400 ರೂ. ಗಳಿಸಬಹುದು. ಹೀಗಾಗಿ ವಿಚ್ಛೇದಿತ ಪತ್ನಿಗೆ ಮಾಸಿಕ 2,000 ರೂ. ಜೀವನಾಂಶ ನೀಡಬೇಕು ಎಂದು ಹೇಳಿದೆ.

ವಿಚ್ಛೇದಿತ ಪತ್ನಿಯು ಪದವೀಧರೆಯಾಗಿದ್ದು, ಶಿಕ್ಷಕಿಯಾಗಿ ತಿಂಗಳಿಗೆ 10,000 ರೂ. ಗಳಿಸುತ್ತಿದ್ದಾರೆ. ಆದರೆ ಅವರಿಗ ತೀವ್ರ ಅಸ್ವಸ್ಥರಾಗಿದ್ದು, ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರನ್ಯಾಯಾಲಯದ ಗಮನಕ್ಕೆ ತಂದರು.

ಪತ್ನಿ ಶಿಕ್ಷಕಿಯಾಗಿರುವ ಕಾರಣ, ಅವರ ಆದಾಯದ ಮೇಲೆ ವ್ಯಕ್ತಿ ತನ್ನ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

Leave a Comment

Advertisements

Recent Post

Live Cricket Update