Advertisements

ಡಬ್ಲ್ಯುಟಿಸಿ: ಐದನೇ ಸ್ಥಾನಕ್ಕೆ ಭಾರತ ಕುಸಿತ

ದುಬೈ:ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಕೈಲಿ ಆಘಾತಕಾರಿ ಸೋಲನುಭವಿಸಿದ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯನ್ನು ಈ ತಿಂಗಳ ಆರಂಭದಲ್ಲಿ 1-1 ರಲ್ಲಿ ಸಮ ಮಾಡಿಕೊಂಡಿದ್ದ ಭಾರತ ಅಲ್ಪಾವಧಿಗೆ ಅಗ್ರಸ್ಥಾನ ಕ್ಕೇರಿತ್ತು.

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಗೆಲ್ಲಲು ಭಾರತ 231 ರನ್‌ಗಳ ಗುರಿಯನ್ನು ಎದುರಿಸಿತ್ತು. ಆದರೆ ಇಂಗ್ಲೆಂಡ್‌ನ ಸ್ಪಿನ್ನರ್ ಟಾಮ್‌ ಹಾರ್ಟ್ಲಿ (62ಕ್ಕೆ7) ಅವರ ದಾಳಿಗೆ ಸಿಲುಕಿ 202 ರನ್‌ಗಳಿಗೆ ಕುಸಿದಿತ್ತು. ತವರಿನಲ್ಲಿ ಅನುಭವಿಸಿದ ಈ ವಿರಳ ಸೋಲಿನಿಂದ ಭಾರತದ ಸ್ಥಾನ ಕುಸಿಯಿತು. ರೋಹಿತ್‌ ಶರ್ಮಾ ಬಳಗದ ಶೇಕಡವಾರು ಪಾಯಿಂಟ್ಸ್‌ 54.16 ರಿಂದ ಹಾಲಿ 43.33ಕ್ಕೆ ಇಳಿದಿದೆ.

ಆಸ್ಟ್ರೇಲಿಯಾ 55 ಪರ್ಸೆಂಟೇಜ್‌ ಪಾಯಿಂಟ್‌ಗಳೊಡನೆ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ಎಲ್ಲವೂ 50 ಪರ್ಸೆಂಟೇಜ್ ಪಾಯಿಂಟ್ಸ್‌ ಹೊಂದಿದ್ದು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಪಾಕಿಸ್ತಾನ, ವೆಸ್ಟ್‌ ಇಂಡೀಸ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಕ್ರಮವಾಗಿ ಆರರಿಂದ ಒಂಬತ್ತರವರೆಗಿನ ಸ್ಥಾನಗಳನ್ನು ಪಡೆದಿವೆ.

ಡಬ್ಲ್ಯುಟಿಸಿ 2023-25ನೇ ಅವಧಿಗೆ ತಂಡಗಳು ಪ್ರತಿ ಟೆಸ್ಟ್ ಗೆಲುವಿಗೆ 12 ಪಾಹಯಿಂಟ್ಸ್, ಡ್ರಾಕ್ಕೆ ನಾಲ್ಕು ಪಾಯಿಂಟ್‌ ಮತ್ತು ಟೈ ಆದರೆ ಆರು ಪಾಯಿಂಟ್ಸ್ ಪಡೆಯುತ್ತವೆ.

Leave a Comment

Advertisements

Recent Post

Live Cricket Update