Advertisements

ಐಸಿಸಿ ಅಧ್ಯಕ್ಷ ಹುದ್ದೆಗೇರಲು ಜಯ್​ ಶಾ ಸಜ್ಜು…!

ನವದೆಹಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಆಗಿರುವ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯೂ ಆಗಿದ್ದಾರೆ. ಆದರೆ ಇದೀಗ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹುದ್ದೆ ತೊರೆಯಬಹುದು ಎಂದು ವರದಿಯಾಗದೆ.
ಇಷ್ಟು ವರ್ಷ ಭಾರತ ಕ್ರಿಕೆಟ್ ಹಾಗೂ ಏಷ್ಯಾ ಕ್ರಿಕೆಟ್​ನಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಿದ್ದ ಜಯ್ ಶಾ ಇದೀಗ ವಿಶ್ವ ಕ್ರಿಕೆಟ್ ಆಳಲು ಚಿಂತಿಸಿದ್ದಾರೆ ಎಂದು ವರದಿಯಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ವಾರ್ಷಿಕ ಸಾಮಾನ್ಯ ಸಭೆ ಜನವರಿ 31 ಹಾಗೂ ಫೆಬ್ರವರಿ 1 ರಂದು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲ್ಲಿದೆ. ಎಸಿಸಿ ಅಧ್ಯಕ್ಷ ಜೈ ಶಾ ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡ ಬಹುದು ಎಂದು ವರದಿಯಾಗಿದೆ.

ಜಯ್​ ಶಾ ಇದೀಗ ಐಸಿಸಿ ಅಧ್ಯಕ್ಷ ಹುದ್ದೆಗೇರಲು ಮುಂದಾಗಿದ್ದಾರೆ. ಈ ವರ್ಷದ ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಜೈ ಶಾ ಕೂಡ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸ ಲಿದ್ದಾರೆ. ಬಾಲಿಯಲ್ಲಿ ನಡೆಯುತ್ತಿರುವ ಎಸಿಸಿ ವಾರ್ಷಿಕ ಸಭೆ 2 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಏಷ್ಯಾದ ಎಲ್ಲಾ ಕ್ರಿಕೆಟ್ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ.

ಎಸಿಸಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿ 2 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಅಂದರೆ ಜೈ ಶಾ ಅಧಿಕಾರಾವಧಿಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಐಸಿಸಿ ಚುನಾವಣೆ ಹಿನ್ನಲೆಯಲ್ಲಿ ಜಯ್ ಶಾ ಮಹತ್ವದ ನಿರ್ಧಾರ ಕೈಗೊಂಡು ಒಂದು ವರ್ಷ ಮುಂಚಿತವಾಗಿ ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡಬಹುದು.

ಮುಂದಿನ ಏಷ್ಯಾಕಪ್ 2025ರಲ್ಲಿ ನಡೆಯಲಿದ್ದು, ಟಿ20 ಮಾದರಿಯಲ್ಲಿ ನಡೆಯಲಿದೆ. ಹೀಗಾಗಿ ಈ ಪಂದ್ಯಾವಳಿಯ ಆತಿಥ್ಯದ ಬಗ್ಗೆಯೂ ಎಸಿಸಿ ಸಭೆ ಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಮಾನ್ ಮತ್ತು ಯುಎಇ 2025 ರ ಏಷ್ಯಾ ಕಪ್ ಆಯೋಜಿಸಲು ಪ್ರಬಲ ಸ್ಪರ್ಧಿಗಳಾಗಿವೆ.

Leave a Comment

Advertisements

Recent Post

Live Cricket Update