ಬೆಂಗಳೂರು: ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ 28 ವರ್ಷಗಳು ಕಳೆದಿವೆ. ಸಹ ಕಲಾವಿದರು ಕಿಚ್ಚನ ಈ ಜರ್ನಿಗೆ ಶುಭಾಶಯಗಳನ್ನು ಕೋರಿದ್ದಾರೆ.
ʼಸ್ಪರ್ಶʼದಿಂದ ಚಂದನವನದಲ್ಲಿ ನಾಯಕ ನಟನಾಗಿ ಕಾಲಿಟ್ಟ ಅವರು, ಇಂದು ಸಾವಿರಾರು ಹೆಜ್ಜೆಗಳನ್ನಿಟ್ಟು ಸಾಧನೆಯ ಶಿಖರವನ್ನೇರಿದ್ದಾರೆ. ಕಿಚ್ಚನ ಪಯಣಕ್ಕಿಂದು 28 ವರ್ಷಗಳು ಪೂರ್ತಿಯಾದ ದಿನ.
“ಮನರಂಜನಾ ಕ್ಷೇತ್ರದಲ್ಲಿ 28 ವರ್ಷಗಳಾಗಿವೆ. ಇದೊಂದು ಅದ್ಭುತ ಪಯಣ. ಈ ಸಂದರ್ಭದಲ್ಲಿ ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಪೋಷಕರು, ಕುಟುಂಬ, ಬರಹಗಾರರು, ತಂತ್ರಜ್ಞರು, ನನ್ನ ಸಹ ಕಲಾವಿದರು, ನಿರ್ಮಾಪಕರು,ಮಾಧ್ಯಮ, ಮನರಂಜನಾ ವಾಹಿನಿಗಳು, ವಿತರಕರು, ಪ್ರದರ್ಶಕರು, ಸಿನಿಮಾ ಒಕ್ಕೂಟ ಹಾಗೂ ನನ್ನ ಪಯಣದ ಪ್ರತಿ ಹೆಜ್ಜೆಯಲ್ಲಿ ಜೊತೆಯಾದವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಬರೆದುಕೊಂಡಿ ದ್ದಾರೆ.
ಈ ಪಯಣದ ಪ್ರತಿ ಹೆಜ್ಜೆಯನ್ನು ನಾನು ಸಂತಷದಿಂದ ಕಳೆದಿದ್ದೇನೆ. ನಾನು ದೋಷರಹಿತನಲ್ಲ.ಪರಿಪೂರ್ಣನಲ್ಲ. ಅವಕಾಶಗಳು ಬಂದಾಗ ನನ್ನ ಕೈಲಾದಷ್ಟು ಪ್ರಯತ್ನವನ್ನು ಮಾಡಿದ್ದೇನೆ. ನಾನು ಹೇಗೆ ಇದ್ದೇನೋ ಹಾಗೆಯೇ ನನ್ನನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದ” ಎಂದು ಕಿಚ್ಚ ಬರೆದುಕೊಂಡಿ ದ್ದಾರೆ.
“ಕೆಲವು ವರ್ಷಗಳ ಹಿಂದೆ ಕಂಠೀರವ ಸ್ಟುಡಿಯೋಗೆ ಅಂಬರೀಷ್ ಮಾಮಾ ಅವರೊಂದಿಗೆ ಕ್ಯಾಮೆರಾ ಎದುರಿಸಲು ʼಬ್ರಹ್ಮʼ ಚಿತ್ರದ ಶೂಟಿಂಗ್ ಗೆ ಹೋಗಿದ್ದೆ. ಇದಕ್ಕೆ ಈಗ 28 ವರ್ಷ ತುಂಬಿದೆ. ಎಲ್ಲರಿಗೂ ಧನ್ಯವಾದ” ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಸದ್ಯ ಕಿಚ್ಚ ಸುದೀಪ್ ʼಮ್ಯಾಕ್ಸ್ʼ ಸಿನಿಮಾದ ಚಿತ್ರೀಕರಣದಲ್ಲಿ ಬರೆದುಕೊಂಡಿದ್ದಾರೆ.