ಲಖನೌ: ಟೀಮ್ ಇಂಡಿಯಾದ ಮಹಿಳಾ ಸ್ಟಾರ್ ಆಲ್ ರೌಂಡರ್ ದೀಪ್ತಿ ಶರ್ಮಾಗೆ ಉತ್ತರಪ್ರದೇಶ ಸರ್ಕಾರ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ ಪಿ) ಹುದ್ದೆ ನೀಡಿ ಗೌರವಿಸಿದೆ
ಟೀಮ್ ಇಂಡಿಯಾದ ಎಲ್ಲಾ ಸ್ವರೂಪದ ಕ್ರಿಕೆಟ್ ನಲ್ಲಿ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿ ಕೊಂಡಿರುವ ದೀಪ್ತಿ ಶರ್ಮಾ, ಡಿಸೆಂಬರ್ 2023ರ ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದಿದ್ದು, ಇತ್ತೀಚೆಗೆ ಬಿಸಿಸಿಐ ಈ ಪ್ರಶಸ್ತಿಯನ್ನು ಶರ್ಮಾ ಅವರಿಗೆ ಹಸ್ತಾಂತರಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಡಿಎಸ್ ಪಿ ಹುದ್ದೆಯ ಆದೇಶ ಪತ್ರ ಪಡೆದಿರುವುದ್ದು ಸರ್ಕಾರಕ್ಕೆ ವಿನಮ್ರನಾಗಿರುತ್ತೇನೆ ಎಂದು ದೀಪ್ತಿ ಶರ್ಮಾ ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಸ್ಪಿನ್ ಆಲ್ ರೌಂಡರ್ ಐಸಿಸಿ ಜನವರಿ 30 (ಮಂಗಳವಾರ) ಪ್ರಕಟಿಸಿದ ಟಿ20-ಐ ಕ್ರಿಕೆಟ್ ನ ಮಹಿಳಾ ನೂತನ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದಿರುವ ದೀಪ್ತಿ ಶರ್ಮಾ, ಇತ್ತೀಚೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಆಲ್ ರೌಂಡರ್ ಪ್ರದರ್ಶನದಿಂದ ಗಮನ ಸೆಳೆದಿದ್ದರು.