Advertisements

ಸಕಲೇಶಪುರದ ರೈಲಿನಲ್ಲಿ ಕಳ್ಳ!

ಸಕಲೇಶಪುರ: ಆತ ಒಬ್ಬ ರೈಲ್ವೆೆ ಡ್ರೈವರ್ ಅಥವಾ ಲೋಕೋ ಪೈಲಟ್. ಆಂಧ್ರಪ್ರದೇಶದ ವಿಜಯನಗರದ ಸ್ವರಾಜ್ ಎಂಬಾತನು, ಮಂಗಳೂರು ಮತ್ತು ಸಕಲೇಶಪುರ ನಡುವಿನ ಗೂಡ್ಸ್ ರೈಲಿನಲ್ಲಿ ಲೋಕೋ ಪೈಲಟ್. ಆದರೆ ಈತ, ಕಳವು ಮಾಡುತ್ತಿದ್ದುದು ಬೆಂಗಳೂರು ಮಂಗಳೂರು ರೈಲುಗಳಲ್ಲಿ!

ಇತ್ತೀಚೆಗೆ, ಮಂಗಳೂರಿಗೆ ಹೋಗುತ್ತಿದ್ದ ಒಬ್ಬ ವ್ಯಕ್ತಿಯು ತನ್ನ ಲ್ಯಾಪ್‌ಟಾಪ್ ಕಳವಾಗಿದೆ ಎಂದು ದೂರು ನೀಡಿದ್ದರು. ಈ ದೂರಿನ ಬೆನ್ನು ಹತ್ತಿದ ಪೊಲೀ ಸರಿಗೆ ಸಿಕ್ಕಿಬಿದ್ದದ್ದೇ ಯುನಿಫಾರ್ಮ್ ಹಾಕಿದ್ದ ಈ ಲೋಕೋ ಪೈಲಟ್. ಆತನು ಡ್ಯೂಟಿ ಯಲ್ಲಿ ಇಲ್ಲದ ಸಮಯದಲ್ಲಿ ಯುನಿಫಾರ್ಮ್ ಹಾಕಿಕೊಂಡು ಓಡಾಡುತ್ತಿದ್ದುದನ್ನು ಗಮನಿಸಿದ ಪೊಲೀಸರು, ಆತನ ಜಾಡು ಹಿಡಿದಾಗ, ಜನವರಿ 25ರಂದು ಕಳವು ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದ. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಕರ ವಸ್ತುಗಳನ್ನು ಕದಿಯುವುದು ಈತನ ಹವ್ಯಾಸ!

ಆತನನ್ನು ವಶಕ್ಕೆ ಪಡೆದು, ಆತನ ಮನೆಯಲ್ಲಿ ತಪಾಸಣೆ ನಡೆಸಿದಾಗ, ಸುಮಾರು 3.00 ಲಕ್ಷ ಮೌಲ್ಯದ ವಾಚು, ಲ್ಯಾಪ್‌ ಟಾಪ್, ಮೊಬೈಲ್ ಮೊದಲಾದ ವಸ್ತುಗಳು ಸಿಕ್ಕಿದವು. ರೈಲಿನ ಲೋಕೋಪೈಲಟ್‌ಗಳೇ ಪ್ರಯಾಣಿಕರ ವಸ್ತುಗಳನ್ನು ಕದಿಯುವ ಹವ್ಯಾಸಕ್ಕೆ ಇಳಿದರೆ, ಪ್ರವಾಸಿಗರ ಗತಿಯೇನು?

Leave a Comment

Advertisements

Recent Post

Live Cricket Update