Advertisements

ನಮೀಬಿಯಾದ ಅಧ್ಯಕ್ಷ ಹಾಗೇ ಗೇನ್‌ಗೋಬ್‌ ನಿಧನ

ವಿಂಡ್‌ಹೋಕ್‌: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಮೀಬಿಯಾದ ಅಧ್ಯಕ್ಷ ಹಾಗೇ ಗೇನ್‌ಗೋಬ್‌(82) ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಗೇನ್‌ಗೋಬ್‌ ಅವರನ್ನು ವಾರದ ಹಿಂದೆ ವಿಂಡ್‌ಹೋಕ್‌ನ ಲೇಡಿ ‍ಪೊಹಂಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಕ್ಯಾನ್ಸರ್‌ ಪತ್ತೆಯಾಗಿದ್ದು, ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು.

ಗೇನ್‌ಗೋಬ್‌ ನಿಧನರಾದ ಸುದ್ದಿಯನ್ನು ನಮೀಬಿಯಾ ಅಧ್ಯಕ್ಷರ ಕಚೇರಿ ತನ್ನ ಅಧಿಕೃತ ‘ಎಕ್ಸ್‌’ ಖಾತೆಯಲ್ಲಿ ಧೃಡಪಡಿಸಿದ್ದು, ಸಾವಿಗೆ ನಿಖರ ಕಾರಣ ವನ್ನು ಅದು ತಿಳಿಸಿಲ್ಲ. ಆದರೆ ಕ್ಯಾನ್ಸರ್ ಚಿಕಿತ್ಸೆಗೆ ಅಧ್ಯಕ್ಷರು ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ಈ ಹಿಂದೆ ತಿಳಿಸಿತ್ತು.

2014ರಲ್ಲಿ ಪ್ರಧಾನಿಯಾಗಿದ್ದ ವೇಳೆ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ಈ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. 2015ರಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ವರ್ಷದ ಕೊನೆಯಲ್ಲಿ ನಮೀಬಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

Leave a Comment

Advertisements

Recent Post

Live Cricket Update