ಬೆಂಗಳೂರು: ಬಿಗ್ ಬಾಸ್ ಒಟಿಟಿ ಮಾಜಿ ಸ್ಪರ್ಧಿ, ಟಿಕ್ಟಾಕ್ ರೀಲ್ಸ್ ಸ್ಟಾರ್ ಸೋನು ಗೌಡ ಇದ್ದ ಕಾರು ಅಪಘಾತ ಕ್ಕಿಡಾಗಿದೆ.
ಸೋನು ಗೌಡ ಅವರ ಕಾರು ಅಪಾರ್ಟ್ಮೆಂಟ್ನ ಪಿಲ್ಲರ್ಗೆ ಡಿಕ್ಕಿ ಹೊಡೆದಿದೆ. ಪಾರ್ಕಿಂಗ್ನಿಂದ ಕಾರು ತೆಗೆಯುವಾಗ ಪಿಲ್ಲರ್ಗೆ ಡಿಕ್ಕಿ ಹೊಡೆದು ವಾಹನ ನಜ್ಜುಗುಜ್ಜಾಗಿದೆ.
ನಗರದ ಗೊಲ್ಲರ ಪಾಳ್ಯ ಹೊಸಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು, ಕೆಎ 43 ಎನ್ 4757 ನಂಬರ್ನ ಶಿಫ್ಟ್ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಜೊತೆಗೆ ಕಾರು ಡಿಕ್ಕಿ ಹೊಡೆದ ಪಿಲ್ಲರ್ ಸಹ ಹಾನಿಯಾಗಿದೆ.
ಕಾರ್ ಡ್ರೈವಿಂಗ್ ಕಲಿಯೋಕ್ ಹೋಗಿ ಸೋನು ಗೌಡ ಎಡವಟ್ಟು ಮಾಡಿಕೊಂಡಿದ್ದಾರೆ. ಬ್ರೇಕ್ ಬದಲು ಎಕ್ಸಿಲೇಟರ್ ತುಳಿದಿರುವುದರಿಂದ ಬಿಲ್ಡಿಂಗ್ ಪಿಲ್ಲರ್ ಗೆ ಕಾರ್ ಗುದ್ದಿದೆ. ಪಾರ್ಕಿಂಗ್ ಏರಿಯಾದ ಪಿಲ್ಲರ್ ಗೆ ಗುದ್ದಿರುವುದರಿಂದ ಬಲೆನೋ ಕಾರ್ನ ಮುಂಬಾಗ ಸಂಪೂರ್ಣ ನುಜ್ಜು ಗುಜ್ಜು ಆಗಿದೆ. ಸದ್ಯ ಸೋನು ಕೈ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಟಿಕ್ ಟಾಕ್ ರೀಲ್ಸ್ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ಈ ಹಿಂದೆ ಇವರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.