Advertisements

ಕಣಿವೆಯಲ್ಲಿ ಹಿಮಪಾತ: ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಹಿಮಪಾತದಿಂದಾಗಿ ದೇಶದ ಇತರ ಭಾಗಗಳ ನಡುವಿನ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸ ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರನ್‍ವೇ ಮೇಲಿರುವ ಹಿಮವನ್ನು ತೆರವುಗೊಳಿಸಲಾಗುತ್ತಿತ್ತು ಆದರೆ ಮತ್ತೆ ಹಿಮ ಸುರಿಯುತ್ತಿದೆ ಇದರಿಂದಾಗಿ ಯಾವುದೇ ವಿಮಾನಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕಾಶ್ಮೀರದ ಬಯಲು ಪ್ರದೇಶಗಳು ಮಧ್ಯಮ ಮತ್ತು ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತದ ವರದಿ ಯಾಗಿದೆ. ಇನ್ನು ರಸ್ತೆಗಳು ಸಂಚಾರಕ್ಕೆ ಅಡಚಣೆ ಯಾಗಬರದೆಂದು ಮುಂಜಾನೆಯಿಂದ ಹಿಮ ತೆರವು ಕಾರ್ಯಾಚರಣೆ ಗಳನ್ನು ನಡೆಸಲಾಗುತ್ತಿದೆ. ಜಾರುವ ರಸ್ತೆಗಳ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸು ವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Leave a Comment

Advertisements

Recent Post

Live Cricket Update