ಬೆಂಗಳೂರು: ‘ಸೂಪರ್ ಸ್ಟಾರ್’ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರ ಪುತ್ರಿ ಸಿತಾರಾ ಘಟ್ಟಮನೇನಿ ಹೆಸರಲ್ಲಿ ಹಣ ಕೇಳಲು ಶುರು ಮಾಡಿದ್ದಾರೆ ವಂಚಕರು.
ಸಾಮಾಜಿಕ ಮಾಧ್ಯಮದಲ್ಲಿ ಮಹೇಶ್ ಬಾಬು ಪುತ್ರಿಯ ಹೆಸರಲ್ಲಿ ವಂಚಕರು ದುರುಪಯೋಗಪಡಿಸಿಕೊಂಡ ಬಗ್ಗೆ ಮಹೇಶ್ ಬಾಬು ಅವರ ನಿರ್ಮಾಣ ಸಂಸ್ಥೆ GMB ಎಂಟರ್ಟೈನ್ಮೆಂಟ್ ಪೋಸ್ಟ್ ಮುಖಾಂತರ ಮಾಹಿತಿ ನೀಡಿದೆ. ಮಹೇಶ್ ಅವರ ಪುತ್ರಿಯ ಹೆಸರಲ್ಲಿ ನಕಲಿ ಖಾತೆ ತೆಗೆದು ಲಕ್ಷ ಲಕ್ಷ ಹಣ ಪಡೆದು ಜನರಿಗೆ ವಂಚನೆ ಮಾಡುತ್ತಿದ್ದಾರೆ. ಇದೀಗ ಮಹೇಶ್ ಅವರು ಈ ಬಗ್ಗೆ ದೂರು ಸಹ ದಾಖಲಿಸಿದ್ದಾರೆ.
ಮಾದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿತಾರಾ ಘಟ್ಟಮನೇನಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಯಾಗಿದ್ದು, ವಂಚಕರು ಹಣ ಕೇಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಸಂಭವಿಸಿದ್ದಲ್ಲಿ ದಯ ವಿಟ್ಟು ತಿಳಿಸಿ. ವಂಚಕರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಟೀಮ್ GMBʼʼಎಂದು ಬರೆದುಕೊಂಡಿ ದ್ದಾರೆ.
ಸಿತಾರಾ ಘಟ್ಟಮನೇನಿ ಈಗ ಪ್ರೀಮಿಯಂ ಆಭರಣ ಬ್ರ್ಯಾಂಡ್ನ ರಾಯಭಾರಿಯಾಗಿದ್ದಾರೆ. ಸಿತಾರಾ ಅವರು ಪ್ರತಿಷ್ಠಿತ ಆಭರಣ ಬ್ರ್ಯಾಂಡ್ ಪಿಎಂಜೆ ಜ್ಯುವೆಲರಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.